

ಮಾರ್ಗೋವಾ: ನಾಯಕ ಸುನೀಲ್ ಛೇಟ್ರಿ (57, 90ನೇ ನಿಮಿಷ) ಹಾಗೂ ಸೀಲ್ಟನ್ ಸಿಲ್ವಾ (1, 22ನೇ ನಿಮಿಷ) ಸಿಡಿಸಿದ ಅವಳಿ ಗೋಲುಗಳ ನೆರವಿನಿಂದ ಮಾಜಿ ಚಾಂಪಿಯನ್ ಬೆಂಗಳೂರು ಎ್ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ದಾಖಲಿಸಿತು. ಜಿಎಂಸಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬಿಎ್ಸಿ ತಂಡ 4-2 ಗೋಲುಗಳಿಂದ ಮುಂಬೈ ಸಿಟಿ ಎಫ್ ಸಿ ತಂಡವನ್ನು ಮಣಿಸಿತು. ಲೀಗ್‌ನಲ್ಲಿ 22 ಅಂಕ ಕಲೆಹಾಕಿದ ಬಿಎಫ ಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರುವ ಮೂಲಕ ಪ್ಲೇಆಫ್ ಅವಕಾಶವನ್ನು ಜೀವಂತವಾಗಿರಿಸಿಕೊಂಡಿತು.
ಇದನ್ನೂ ಓದಿ: ಆರ್.ಅಶ್ವಿನ್ ಶತಕಕ್ಕೆ ಮೊಹಮದ್ ಸಿರಾಜ್ ಸಂಭ್ರಮಿಸಿದ್ದು
ಪಂದ್ಯದ ಮೊದಲ ನಿಮಿಷದಲ್ಲೇ ಗೋಲು ಬಾರಿಸಿದ ಸೀಲ್ಟನ್ ಸಿಲ್ವಾ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಬಳಿಕ 22ನೇ ನಿಮಿಷದಲ್ಲೂ ಫ್ರಿ ಕಿಕ್ ಮೂಲಕ ಮತ್ತೊಂದು ಗೋಲು ಬಾರಿಸಿದರು. ಇದರಿಂದ ಬಿಎಫ್ ಸಿ ಮೊದಲಾರ್ಧದಲ್ಲಿ 2-0 ಯಿಂದ ಮುನ್ನಡೆ ಸಾಧಿಸಿತು. ತೀವ್ರ ಜಿದ್ದಾಜಿದ್ದಿನಿಂದ ಕೂಡ ದ್ವಿತೀಯಾರ್ಧದ ಹೋರಾಟದಲ್ಲಿ ಉಭಯ ತಂಡಗಳು ಪ್ರಬಲ ಪೈಪೋಟಿ ನಡೆಸಿದವು. ಲೀ ಫಾಂಡ್ರೆ (50, 72ನೇ ನಿಮಿಷ) ಅವಳಿ ಗೋಲು ಬಾರಿಸಿ ಬಿಎಫ್ ಸಿ ತಿರುಗೇಟು ನೀಡಲು ಯತ್ನಿಸಿದರು. ನಾಯಕ ಸುನೀಲ್ ಛೇಟ್ರಿ ಮಿಂಚಿನ ನಿರ್ವಹಣೆ ಮೂಲಕ ಗೋಲಿನ ಅಂತರ ಹಿಗ್ಗಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬಿಎಫ್ ಸಿ ಪರ ಆಡಿದ 200ನೇ ಪಂದ್ಯವನ್ನು ಛೇಟ್ರಿ ಅವಳಿ ಗೋಲು ಸಿಡಿಸುವ ಮೂಲಕ ಅವಿಸ್ಮರಣೀಯವಾಗಿಸಿಕೊಂಡರು.
ಮುಂದಿನ ಎದುರಾಳಿ: ಗೋವಾ ಎಫ್ ಸಿ
ಯಾವಾಗ: ಫೆಬ್ರವರಿ 21