ಸತತ 2ನೇ ಪಂದ್ಯದಲ್ಲೂ ಡ್ರಾಗೆ ತೃಪ್ತಿಪಟ್ಟ ಬಿಎಫ್ ಸಿ

BFC AND HFC FOR WEB
Published on

ಫರ್ಟೊಡ (ಗೋವಾ): ಹೈದರಾಬಾದ್ ಎಫ್ ಸಿ ತಂಡದಿಂದ ಪ್ರಬಲ ಪೈಪೋಟಿ ಎದುರಿಸಿದ ಬೆಂಗಳೂರು ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ತನ್ನ 2ನೇ ಪಂದ್ಯದಲ್ಲೂ ಡ್ರಾಗೆ ತೃಪ್ತಿಪಟ್ಟುಕೊಂಡಿತು. ಫರ್ಟೊಡ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಗೋಲು ರಹಿತ ಸಮಬಲ ಸಾಧಿಸಿದವು. ಮೊದಲ ಪಂದ್ಯದಲ್ಲಿ ಗೋವಾ ಎಫ್ ಸಿ ಎದುರು ಕಡೇ ಕ್ಷಣದಲ್ಲಿ ಗೆಲುವಿನ ಅವಕಾಶ ಕೈಚೆಲ್ಲಿದ್ದ ಬಿಎಫ್ ಸಿ, ಮತ್ತೊಮ್ಮೆ ನಿರಾಸೆ ಅನುಭವಿಸಿತು.

2 ಪಂದ್ಯಗಳಿಂದ 2 ಅಂಕ ಕಲೆಹಾಕಿದ ಬಿಎಫ್ ಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲೇ ಉಳಿಯಿತು. ಮೊದಲ ಪಂದ್ಯದಲ್ಲಿ ಒಡಿಶಾ ಎಫ್ ಸಿ ಎದುರು ಗೆಲುವಿನ ಮೂಲಕ ಶುಭಾರಂಭ ಕಂಡಿರುವ ಹೈದರಾಬಾದ್ ತಂಡ ರಕ್ಷಣಾ ವಿಭಾಗದಲ್ಲಿ ಭರ್ಜರಿ ನಿರ್ವಹಣೆ ತೋರಿತು. ಇಂಜುರಿ ವೇಳೆ ಕಡೇ ನಿಮಿಷದಲ್ಲಿ ಬಿಎಫ್ ಸಿ ಆಟಗಾರರ ಎಡವಟ್ಟಿನಿಂದ ಹೈದರಾಬಾದ್ ತಂಡಕ್ಕೆ ಫ್ರಿ ಕಿಕ್ ಅವಕಾಶ ಲಭಿಸಿತು. ಆದರೆ, ಬಿಎಫ್ ಸಿ ರಕ್ಷಣಾ ಪಡೆ ತಡೆಗೋಡೆಯಾಗುವ ಮೂಲಕ ಕಡೇ ಕ್ಷಣದಲ್ಲಿ ಗೋಲು ಬಿಟ್ಟುಕೊಡಲು ನಿರಾಕರಿಸಿತು.

ಉಭಯ ತಂಡಗಳು ಅಂತಿಮ ಹಂತದವರೆಗೂ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದವು. ಬಿಎಫ್ ಸಿ ತಂಡದ ಗೋಲು ಕೀಪರ್ ಗುರುಪ್ರೀತ್ ಸಿಂಗ್ ಸಂಧು ಉತ್ತಮ ನಿರ್ವಹಣೆ ಮೂಲಕ ಗಮನಸೆಳೆದರು.

ಬಿಎಫ್ ಸಿ ಮುಂದಿನ ಎದುರಾಳಿ: ಚೆನ್ನೈಯಿನ್ ಎಫ್ ಸಿ

ಯಾವಾಗ : ಶುಕ್ರವಾರ (ಡಿ.4).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net