ಗಾಲಿಕುರ್ಚಿ ಟಿ20 ಲೀಗ್​ನಲ್ಲಿ ಬೆಂಗಳೂರು ಈಗಲ್ಸ್​ ರನ್ನರ್​ಅಪ್​; ಚೆನ್ನೈ ಲೆಜೆಂಡ್ಸ್ ಚಾಂಪಿಯನ್​

web asl (1)
Published on

ಬೆಂಗಳೂರು: ಆತಿಥೇಯ ಬೆಂಗಳೂರು ಈಗಲ್ಸ್​ ತಂಡ ಭಾರತದ ಪ್ರಮುಖ ಅಗರಬತ್ತಿ ತಯಾರಕ ಸಂಸ್ಥೆ "ಸೈಕಲ್​ ಪ್ಯೂರ್​' ಶೀರ್ಷಿಕೆ ಪ್ರಾಯೋಜಕತ್ವರಾಗಿದ್ದ 3ನೇ ಆವೃತ್ತಿಯ ಎಬಿಲಿಟಿ ಸ್ಪೋರ್ಟ್ಸ್​ ಲೀಗ್​ (ಎಎಸ್​ಎಲ್​) ಅಂಗವಿಕಲರ ಗಾಲಿಕುರ್ಚಿ ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಬೆಂಗಳೂರು ಹೊರವಲಯದ ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ ಸೋಮವಾರ ನಡೆದ ಫೈನಲ್​ ಪಂದ್ಯದಲ್ಲಿ ಬೆಂಗಳೂರು ಈಗಲ್ಸ್​ ತಂಡ ಚೆನ್ನೈ ಲೆಜೆಂಡ್ಸ್​ ಎದುರು 53 ರನ್​ಗಳಿಂದ ಪರಾಭವಗೊಂಡಿತು.

ಮೊದಲು ಬ್ಯಾಟಿಂಗ್​ ಮಾಡಿದ ಚೆನ್ನೆ$ ಲೆಜೆಂಡ್ಸ್​ ತಂಡ ಸುರೇಶ್​ ಸೆಲ್ವಂ (111*ರನ್​, 43 ಎಸೆತ) ಶತಕದ ಬಲದಿಂದ 2 ವಿಕೆಟ್​ಗೆ 203 ರನ್​ ಗಳಿಸಿತು. ಪ್ರತಿಯಾಗಿ ಜೆನಿಶ್​ ಆಂಟೋ (24ಕ್ಕೆ 4) ದಾಳಿಗೆ ಕುಸಿದ ಬೆಂಗಳೂರು 18.4 ಓವರ್​ಗಳಲ್ಲಿ 150 ರನ್​ಗಳಿಗೆ ಆಲೌಟ್​ ಆಯಿತು. ಸೈಕಲ್​ ಪ್ಯೂರ್​ ಅಗರಬತ್ತಿಯ ಸಿಇಒ ಅರ್ಜುನ್​ ರಂಗ ಮತ್ತು ಕ್ರಿಕೆಟಿಗ ಕೃಷ್ಣಪ್ಪ ಗೌತಮ್​ ಪ್ರಶಸ್ತಿ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net