ಪ್ರೊ ಕಬಡ್ಡಿ ಲೀಗ್​ನಲ್ಲಿ ಬೆಂಗಾಲ್​ ವಾರಿಯರ್ಸ್​ಗೆ ಭರ್ಜರಿ ಗೆಲುವು; ತೆಲುಗು ಟೈಟಾನ್ಸ್ ಬೆಂಬಿಡದ ಸೋಲು

pro web
Published on

ಮುಂಬೈ: ನಾಯಕ ಹಾಗೂ ಟೂರ್ನಿಯ ದುಬಾರಿ ಆಟಗಾರ ಪವನ್​ ಶೆರಾವತ್​ (11) ಏಕಾಂಗಿ ಹೋರಾಟದ ನಡುವೆ ತೆಲುಗು ಟೈಟಾನ್ಸ್​ ತಂಡ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ 10ನೇ ಸೋಲು ಅನುಭವಿಸಿದೆ.

ಮುಂಬೈ ಚರಣದಲ್ಲಿ ಮಂಗಳವಾರ ನಡೆದ ಏಕೈಕ ಪಂದ್ಯದಲ್ಲಿ ತೆಲುಗು ಟೈಟಾನ್ಸ್​ ತಂಡ ಬೆಂಗಾಲ್​ ವಾರಿಯರ್ಸ್​ ಎದುರು 26-46 ಅಂತರದಿಂದ ಶರಣಾಯಿತು. ಬೆಂಗಾಲ್​ ಮೊದಲಾರ್ಧದಲ್ಲೇ 2 ಬಾರಿ ತೆಲುಗು ತಂಡವನ್ನು ಆಲೌಟ್​ ಮಾಡಿ 27-10 ಅಂಕಗಳಿಂದ ಮುನ್ನಡೆ ಸಾಧಿಸಿತು. ಬೆಂಗಾಲ್​ ಪರ ಡಿೆಂಡಿಂಗ್​ನಲ್ಲಿ ವೈಭವ್​ ಗಾರ್ಜೆ (9) ಗಮನಾರ್ಹ ನಿರ್ವಹಣೆ ತೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net