

Priyajit Ghosh: ಬಂಗಾಳದ ಉದಯೋನ್ಮುಖ ಕ್ರಿಕೆಟ್ ತಾರೆ ಪ್ರಿಯಜಿತ್ ಘೋಷ್, ತಮ್ಮ 22 ವಯಸ್ಸಿನಲ್ಲಿ ಬದುಕಿನ ಪಯಣಕ್ಕೆ ಶುಕ್ರವಾರ (ಆಗಸ್ಟ್ 1) ವಿದಾಯ ಹೇಳಿದ್ದಾರೆ.
ಇದನ್ನೂ ಓದಿ:ಶಿಥಿಲ ಶಾಲಾ ಕಟ್ಟಡಗಳ ಪಟ್ಟಿ ಕೊಡಿ
ಬಿರ್ಭುಮ್ ಜಿಲ್ಲೆಯ ಬೋಲ್ಪುರದ ನಿವಾಸಿ ಪ್ರಿಯಜಿತ್ ಕ್ರಿಕೆಟ್ ಬಗ್ಗೆ ತುಂಬಾ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿದ್ದರು, ವಿರಾಟ್ ಕೊಹ್ಲಿ ರೀತಿ ಫಿಟ್ನೆಸ್ ಕಾಯ್ದುಕೊಳ್ಳಲು ಬೋಲ್ಪುರದಲ್ಲಿನ ಜಿಮ್‌ಗೆ ತೆರಳುತ್ತಿದ್ದರು. ಎಂದಿನಂತೆ ಶುಕ್ರವಾರ ಬೆಳಿಗ್ಗೆ ಜಿಮ್ನಲ್ಲಿ ವ್ಯಾಯಾಮ ಮಾಡುವಾಗ, ಹೃದಯಾಘಾತದಿಂದ ಬೆವರು ಸುರಿಸುತ್ತಾ ಕೆಳಗೆ ಬಿದ್ದರು ತಕ್ಷಣವೇ ಆಸ್ಪತ್ರೆಗೆ ಸೇರಿಸಿದರು ಯಾವುದೇ ಪ್ರಯೋಜನವಾಗಲಿಲ್ಲ, ಕೊನೆಗೆ ಆಸ್ಪತ್ರೆಯಲ್ಲಿ ನಿಧನರಾದರು ಎಂದು ವರದಿಯಾಗಿದೆ.
ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಆಡಬೇಕು ಮುಂದೆ ದೇಶವನ್ನು ಪ್ರತಿನಿಧಿಸುವ ಆಸೆ ಇಟ್ಟುಕೊಂಡಿದ್ದರು, ಕ್ರಿಕೆಟ್ ಅವರಿಗೆ ಕೇವಲ ಕ್ರೀಡೆಯಾಗಿರಲಿಲ್ಲ ಅದೊಂದು ರೀತಿ ತಪಸ್ಸಾಗಿತ್ತು. ಜಿಲ್ಲಾ ಮಟ್ಟದಿಂದ ಘೋಷ್ ಅವರ ಕ್ರಿಕೆಟ್ ಪಯಣ ಪ್ರಾರಂಭವಾಗಿತ್ತು.
2018-19 ರಲ್ಲಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (CAB) ಆಯೋಜಿಸಿದ್ದ ಅಂತರ-ಜಿಲ್ಲಾ ಅಂಡರ್-16 ಕ್ರಿಕೆಟ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಉತ್ತಮ ಸಾಧನೆ ಮಾಡಿದರು.
ಪ್ರಿಯಜಿತ್ ಘೋಷ್ ಅಕಾಲಿಕ ಮರಣ ಅವರ ಸ್ನೇಹಿತರು, ಕುಟುಂಬವರ್ಗ ಮತ್ತು ತಂಡದ ಸದಸ್ಯರನ್ನು ಸೇರಿದಂತೆ ಇಡೀ ಬಂಗಾಳ ಕ್ರಿಕೆಟ್ ವಲಯವನ್ನೇ ಆಘಾತಗೊಳಿಸಿದೆ.(ಏಜೆನ್ಸೀಸ್)