

Ben Stokes: ಮ್ಯಾಂಚೆಸ್ಟರ್ನಲ್ಲಿ ನಡೆದ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ. ಇದು ಟೀಮ್ ಇಂಡಿಯಾ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಪ್ರಸ್ತುತ, 2-1 ಅಂತರದಲ್ಲಿ ಬೆನ್ ಸ್ಟೋಕ್ಸ್ ಪಡೆ ಮುನ್ನಡೆ ಸಾಧಿಸಿದ್ದೇ ಆದರೂ ಐದನೇ ಹಾಗೂ ಅಂತಿಮ ಟೆಸ್ಟ್ನಲ್ಲಿ ಯಾರು ಜಯ ಸಾಧಿಸಲಿದ್ದಾರೆ? ಎಂಬ ಕುತೂಹಲ ಮೂಡಿದೆ. ಕೊನೆಯ ಪಂದ್ಯ ಇದೇ ಜು.31ರಿಂದ (ಗುರುವಾರ) ಲಂಡನ್ನ ದಿ ಓವಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
ನಾಲ್ಕನೇ ಟೆಸ್ಟ್ನ ಕೊನೆ ದಿನದಾಟದಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಕ್ಯಾಪ್ಟನ್ ಶುಭಮನ್ ಗಿಲ್, ಕೆ.ಎಲ್. ರಾಹುಲ್, ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ, ಪಂದ್ಯವನ್ನು ಡ್ರಾದಲ್ಲಿ ಅಂತ್ಯ ಕಾಣಿಸಲು ಶ್ರಮಿಸಿದರು. ಪಂದ್ಯ ಮುಗಿದ ಬಳಿಕ ಡ್ರಾ ಕುರಿತು ಪ್ರತಿಕ್ರಿಯಿಸಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, "ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಅಸಾಧಾರಣ ಬ್ಯಾಟಿಂಗ್, ನಾವು ಗೆಲ್ಲಬೇಕಾಗಿದ್ದ ಪಂದ್ಯವನ್ನು ಡ್ರಾನಲ್ಲಿ ಮುಕ್ತಾಯ ಮಾಡಿತು" ಎಂದಿದ್ದಾರೆ.
"ಜಡೇಜಾ ಮತ್ತು ಸುಂದರ್ ಡ್ರಾಗೆ ಮಾಡಿದ್ದಕ್ಕಾಗಿ, ಎಲ್ಲಾ ಪ್ರಶಂಸೆಗಳಿಗೆ ಅರ್ಹರು. ಅವರಿಬ್ಬರನ್ನೂ ಎಷ್ಟೇ ಹೊಗಳಿದರೂ ಅದು ಸಾಲಲ್ಲ. ತಂಡದ ಗೆಲುವು ವೈಯಕ್ತಿಕ ಪ್ರದರ್ಶನಕ್ಕಿಂತ ಮುಖ್ಯ. ಆಲ್ರೌಂಡರ್ ಆಟಗಾರರು ಹೇಗೆ ಆಡುತ್ತಾರೆ ಎಂಬುದು ಪಂದ್ಯದ ಫಲಿತಾಂಶದಿಂದ ನಿರ್ಣಯಿಸಲಾಗುತ್ತದೆ. ಅದೇ ಟೀಮ್ ಇಂಡಿಯಾ ಈ ಪಂದ್ಯವನ್ನು ಗೆದ್ದಿದ್ದರೆ, ಅವರಿಬ್ಬರ ಪ್ರದರ್ಶನವನ್ನು ಹೆಚ್ಚು ಗುಣಗಾನ ಮಾಡಲಾಗುತ್ತಿತ್ತು" ಎಂದರು.
"ಬೌಲಿಂಗ್, ಫೀಲ್ಡಿಂಗ್ ಮತ್ತು ಬ್ಯಾಟಿಂಗ್ನಲ್ಲಿ ನಿರಂತರವಾಗಿ ಕೆಲಸ ಮಾಡುವುದು ಕಠಿಣವಾದ ಕೆಲಸ. ಈ ಪ್ರಕ್ರಿಯೆಯಲ್ಲಿ ಅವರ ದೇಹವು ತುಂಬಾ ದಣಿದಿದೆ. ಪಂದ್ಯ ಮುಂದುವರೆದಂತೆ ಪಿಚ್ ಬ್ಯಾಟಿಂಗ್ಗೆ ಹೆಚ್ಚು ಅನುಕೂಲಕರವಾಯಿತು. ಇಲ್ಲಿ ಬಲಗೈ ಬ್ಯಾಟ್ಸ್ಮನ್ಗಳು ಕೆಲವು ತೊಂದರೆಗಳನ್ನು ಎದುರಿಸಿದರೂ, ಎಡಗೈ ಬ್ಯಾಟರ್ಗಳು ಯಾವುದೇ ಸಮಸ್ಯೆಯನ್ನು ನೋಡಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ಡಕೆಟ್ ಮತ್ತು ಜ್ಯಾಕ್ ಕ್ರಾಲಿ ಅವರ ಬ್ಯಾಟಿಂಗ್ ಬಲ ನಮ್ಮ ತಂಡಕ್ಕೆ ಬಲವಾದ ಅಡಿಪಾಯವನ್ನೇ ಹಾಕಿಕೊಟ್ಟಿತು" ಎಂದು ಸ್ಟೋಕ್ಸ್ ಹೇಳಿದರು.
ಭಾರತ ಮೊದಲ ಇನ್ನಿಂಗ್ಸ್ 358 ರನ್ಗೆ ಆಲ್ ಔಟ್
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 669 ರನ್ಗೆ ಆಲ್ ಔಟ್
ಭಾರತ ಎರಡನೇ ಇನ್ನಿಂಗ್ಸ್ 425/4
ಫಲಿತಾಂಶ: ಡ್ರಾನಲ್ಲಿ ಅಂತ್ಯ