ಸಾನಿಯಾ-ಶೋಯೆಬ್ ವಿಚ್ಛೇದನ ಪಡೆದಿದ್ದಾರೆ; ವದಂತಿಗಳಿಗೆ ತೆರೆ ಎಳೆದ ಕುಟುಂಬಸ್ಥರು

Sania Shoaiab
Published on

ಹೈದರಾಬಾದ್: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ, ಅನುಭವಿ ಆಲ್ರೌಂಡರ್​ ಶೋಯೆಬ್​ ಮಲಿಕ್​ ಮೂರನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ. ತಮ್ಮ ಎರಡನೇ ಪತ್ನಿ ಸಾನಿಯಾ ಮಿರ್ಜಾ ಅವರೊಂದಿಗಿನ ವಿಚ್ಛೇದನ ವಧಂತಿಗಳ ನಡುವೆ ಖ್ಯಾತ ನಟಿ ಸನಾ ಜವೇದ್​ ಅವರನ್ನು ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ.

ಇತ್ತ ಸಾನಿಯಾ ಮಿರ್ಜಾ ಅವರಿಗೆ ವಿಚ್ಛೇದನ ನೀಡದೆ ಶೋಯೆಬ್​ ಮಲಿಕ್​ ಸನಾ ಅವರನ್ನು ವಿವಾಹವಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಾನಿಯಾ ಕುಟುಂಬಸ್ಥರು ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಾನಿಯಾ ಕುಟುಂಬದ ಆಪ್ತರೊಬ್ಬರು, ಸಾನಿಯಾ ಯಾವಾಗಲೂ ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕರಿಂದ ದೂರವಿಟ್ಟಿದ್ದಾಳೆ. ಆದರೆ ಶೋಯೆಬ್ ಮತ್ತು ಅವಳು ವಿಚ್ಛೇದನ ಪಡೆದು ಕೆಲವು ತಿಂಗಳುಗಳಾಗಿವೆ. ಆ ಬಗ್ಗೆ ಮಾತನಾಡುವ ಸಂದರ್ಭ ಈಗ ಬಂದಿದೆ. ಶೋಯಬ್ ಮಲಿಕ್ ಅವರ ಮುಂದಿನ ಪ್ರಯಾಣಕ್ಕೆ ಅವರು ಶುಭ ಹಾರೈಸಿದ್ದಾರೆ.

ಸಾನಿಯಾ ಅವರ ಜೀವನದ ಈ ಸೂಕ್ಷ್ಮ ಅವಧಿಯಲ್ಲಿ, ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳು ಯಾವುದೇ ಊಹಾಪೋಹಗಳಿಗೆ ಕಿವಿಯಾಗದೆ, ಗೌಪ್ಯತೆಯ ಅಗತ್ಯವನ್ನು ಗೌರವಿಸುವಂತೆ ವಿನಂತಿಸಲು ಬಯಸುತ್ತೇವೆ ಎಂದು ಸಾನಿಯಾ ಅವರ ಕುಟುಂ ಆಪ್ತರೊಬ್ಬರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

2010ರ ಏಪ್ರಿಲ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್‌ ಆಟಗಾರ ಶೋಯಬ್ ಹೈದರಾಬಾದ್‌ನಲ್ಲಿ ಮದುವೆಯಾಗಿದ್ದರು. ಇವರಿಗೆ ಇಜಾನ್‌ ಎಂಬ ಐದು ವರ್ಷದ ಮಗ ಇದ್ದಾನೆ. ಸಾನಿಯಾ ಅವರು ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಸ್ಪರ್ಧೆಗಳಲ್ಲಿ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net