ತಂದೆ-ತಾಯಿಯ ನಿಸ್ವಾರ್ಥ ಪ್ರೀತಿ, ಬೆಂಬಲಕ್ಕೆ ಕೃತಜ್ಞರಾಗಿರಿ ಎಂದ ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ

web kir
Published on

ಬೆಂಗಳೂರು: ಹಿರಿಯರ ಮಾನಸಿಕ ಯೋಗಕ್ಷೇಮದ ಕುರಿತು ಸಂವಾದ ಕುರಿತು ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಡಾ. ಸೈಯದ್ ಎಂ.ಎಚ್. ಕಿರ್ಮಾನಿ ಅವರು, “ನೀವು ಸೆಲ್ಫ್ ಮೇಡ್ ಆಗಿರಬಹುದು, ಆದರೆ ನಿಮ್ಮ ತಂದೆ ತಾಯಿಯ ನಿಸ್ವಾರ್ಥ ಪ್ರೀತಿ, ಬೆಂಬಲವಿಲ್ಲದೆ ಬೆಳೆದಿಲ್ಲ. ನನ್ನ ತಾರುಣ್ಯದಲ್ಲಿ ನಾನು ಸಾಕಷ್ಟು ಸಾಧನೆ ಮಾಡಿದ್ದೇನೆ. ಈಗ ಹಿರಿಯ ವಯಸ್ಸಿನ ಜೀವಗಳಿಗೆ ಒಂದು ಒಳ್ಳೆಯ ವ್ಯವಸ್ಥೆ ರೂಪಿಸುವುದು ಎಷ್ಟು ಮುಖ್ಯ ಎಂದು ಅರ್ಥ ಮಾಡಿಕೊಂಡಿದ್ದೇನೆ. ನಿಮ್ಮ ಪೋಷಕರು ನಿಮ್ಮ ಜೀವನದಲ್ಲಿ ಅವಶ್ಯವಾಗಿ ಬೇಕು. ಅವರಿಗೆ ಕೃತಜ್ಞರಾಗಿರುವುದು ಮತ್ತು ಅವರು ಆರಾಮವಾಗಿ ಇರುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ. ನಮ್ಮ ಹಿರಿಯರಿಗೆ ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬೆಂಬಲವನ್ನು ಒದಗಿಸಲು ನಾವು ಒಂದಾಗಬೇಕು ಮತ್ತು ಅದಕ್ಕೆ ಪೂರಕವಾದ ನೀತಿಗಳನ್ನು ರೂಪಿಸಬೇಕು. ಅವರಿಗೆ ಒಂಟಿತನ ಕಾಡುವಂತೆ ಮಾಡಬಾರದು. ಇಂಥದ್ದೊಂದು ಮಹತ್ವದ ಕಾರ್ಯವನ್ನು ಮಾಡುತ್ತಿರುವ ಕರಿಸ್ತಾ ಫೌಂಡೇಶನ್ ಗೆ ಅಭಿನಂದನೆ ಮತ್ತು ಕೃತಜ್ಞತೆ. ಇದೊಂದು ಮಾನವೀಯತೆಗೆ ಮಾಡುವ ದೊಡ್ಡ ಸೇವೆಯಾಗಿದೆ” ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net