

ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭವಿಷ್ಯ ನಿರ್ಧಾರ ಮಾಡಲು ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ಗೆ ಭಾರತೀಯ ಕ್ರಿಕೆಟ್ ಮಂಡಳಿ(BCCI) ಮುಕ್ತ ಅವಕಾಶ ನೀಡಿದೆ ಎಂದು ವರದಿಯಾಗಿದೆ.
ಹೌದು, ಇದೇ ಫೆ.19ರಿಂದ ಆರಂಭವಾಗಲಿರುವ ಚಾಪಿಂಯನ್ ಟ್ರೋಫಿ ಆಡಲಿರುವ ದಿಗ್ಗಜ ಆಟಗಾರರಾದ ರೋಹಿತ್, ವಿರಾಟ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಇದೀಗ ಇಬ್ಬರ ಆಟಗಾರರ ಭವಿಷ್ಯ ನಿರ್ಧಾರ ಮಾಡಲು ಅಜಿತ್- ಗಂಭೀರ್ಗೆ ಬಿಸಿಸಿಐ ಕೂಡ ಮುಕ್ತ ಅವಕಾಶ ನೀಡಿದೆ.
ವರದಿಗಳ ಪ್ರಕಾರ, ''ಭಾರತ ಕ್ರಿಕೆಟ್ ತಂಡದ ಸುಧಾರಣೆಗಾಗಿ ಯಾವುದೇ ನಿರ್ಧಾರ ತೆಗದುಕೊಳ್ಳಲು ಈ ಇಬ್ಬರಿಗೆ ಬಿಸಿಸಿಐ ಅವಕಾಶ ನೀಡಿದೆ. ಮುಂದೆ ಸಾಗುವ ಸಮಯ ಬಂದಿದೆ. ಬಾರ್ಡರ್- ಗವಸ್ಕರ್ ಸರಣಿಯಲ್ಲಿ ಅವರ(ವಿರಾಟ್-ರೋಹಿತ್) ಪ್ರದರ್ಶನ ನೋಡಿದ್ದಿರಾ?, ರಣಜಿಯಲ್ಲಿ ಅವರ ಪ್ರದರ್ಶನ? ಮತ್ತು ಮುಂದಿನ ಚಾಪಿಂಯನ್ ಟ್ರೋಫಿ ಪಂದ್ಯಗಳು ಅವರ ಭವಿಷ್ಯ ನಿರ್ಧಾರ ಮಾಡಲಿವೆ'' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದ ವರದಿ ಉಲ್ಲೇಖಿಸಿವೆ.
ಕೊಹ್ಲಿ ಕೂಡ ಒತ್ತಡದಲ್ಲಿ ಇರುವುದು ಖಚಿತ, ಕಾರಣ ಮುಂದಿನ ಚಾಂಪಿಯನ್ ಟ್ರೋಫಿ ಸೇರಿದಂತೆ ಅಸಿಸ್ ಪಂದ್ಯಗಳನ್ನು ಎದುರಿಸಬೇಕಾಗುತ್ತಿದೆ. ಟೆಸ್ಟ್ ತಂಡದಲ್ಲಿ ಕೊಹ್ಲಿ ಭವಿಷ್ಯ ಚರ್ಚೆಗೆ ಗ್ರಾಸವಾಗಿದೆ. ರೋಹಿತ್ನಂತೆಯೇ ವಿರಾಟ್ ಕೂಡ ಉತ್ತಮ ಪ್ರದರ್ಶನ ನೀಡದಿದ್ದರೆ, ಗಂಭೀರ್ ಮತ್ತು ಅಜಿತ್ ಮುಂದೆ ದೊಡ್ಡ ಸವಾಲನ್ನು ಎದುರಿಸಬೇಕಾಗುತ್ತದೆ.(ಏಜೆನ್ಸೀಸ್)