

ಮುಂಬೈ: ಬಿಸಿಸಿಐ 2020ರ ಐಪಿಎಲ್ನ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈಗಾಗಲೇ ಲೀಗ್ನಲ್ಲಿರುವ ಎಂಟು ಫ್ರಾಂಚೈಸಿಗಳು ತಾವು ಆಡುವ ಪಂದ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದವು. ಈಗ ಬಿಸಿಸಿಐ ಅದನ್ನು ಅಧಿಕೃತವಾಗಿ ಐಪಿಎಲ್ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಮಾರ್ಚ್ 29 ರಂದು ಮುಂಬೈನಲ್ಲಿ ಮೊದಲ ಪಂದ್ಯ ನಡೆಯಲಿದ್ದರೆ, ಮೇ 24 ರಂದು ಫೈನಲ್ ನಡೆಯಲಿದೆ. ಅದರೊಂದಿಗೆ ಈವರೆಗಿನ ಅತಿದೀರ್ಘ ಐಪಿಎಲ್ ಟೂರ್ನಿ ಇದಾಗಿರಲಿದೆ. ಒಟ್ಟು ಟೂರ್ನಿ 57 ದಿನಗಳ ಕಾಲ ನಡೆಯಲಿದೆ. ರಾಜಸ್ಥಾನ ರಾಯಲ್ಸ್ ತಂಡ ಏ.5 ಹಾಗೂ 9 ರಂದು ಆಡಲಿರುವ ಪಂದ್ಯಗಳು ಒಂದೋ ಜೈಪುರ ಅಥವಾ ಗುವಾಹಟಿಯಲ್ಲಿ ನಡೆಯಲಿದೆ.
ಲೀಗ್ ಹಂತದಲ್ಲಿ ಕೇವಲ 6 ದಿನ ಮಾತ್ರವೇ ಡಬಲ್ಹೆಡರ್ ನಡೆಯಲಿದೆ. ರಾತ್ರಿಯ ಪಂದ್ಯಗಳು 8 ಗಂಟೆಗೆ ಹಾಗೂ ಸಂಜೆಯ ಪಂದ್ಯಗಳು ನಾಲ್ಕು ಗಂಟೆಗೆ ಆರಂಭವಾಗಲಿದೆ. ಪ್ಲೇ ಆಫ್ ಪಂದ್ಯಗಳ ದಿನಾಂಕವನ್ನು ಇನ್ನೂ ಪ್ರಕಟ ಮಾಡಲಾಗಿಲ್ಲ.