SA vs IND: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಇಶಾನ್ ಕಿಶಾನ್ ಕೂಡ ಔಟ್! ಕಾರಣ ಹೀಗಿದೆ..

ವಿಜಯವಾಣಿ - 2023-12-23T120709.042
Published on

ಹೊಸದಿಲ್ಲಿ: ಭಾರತೀಯ ಕ್ರಿಕೆಟ್​ ತಂಡದ ವಿಕೆಟ್ ಕೀಪರ್ ಹಾಗೂ ಎಡಗೈ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಉನ್ನತ ಮಟ್ಟದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದು, ಅದಕ್ಕೆ ಮಾನಸಿಕ ಆಯಾಸವೇ ಕಾರಣ ಎಂದು ಹೇಳಲಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಇಶಾನ್ ಹೊರನಡೆಯಲು 'ಮಾನಸಿಕ ಆಯಾಸ' ಕಾರಣ ಎಂದು ಇತ್ತೀಚಿನ ವರದಿಯೊಂದು ಉಲ್ಲೇಖಿಸಿದೆ. ಮಾಹಿತಿಯ ಪ್ರಕಾರ, ಎಡಗೈ ಬ್ಯಾಟರ್ ಕಳೆದ ವರ್ಷದಿಂದ ತಂಡದೊಂದಿಗೆ ನಿರಂತರವಾಗಿ ಪ್ರಯಾಣ ಮಾಡಿದ್ದೇ ಇದಕ್ಕೆ ಕಾರಣವಾಗಿದ್ದು, ಸದ್ಯ ಕೊಂಚ ವಿರಾಮ ಬೇಕು ಎಂದು ಟೀಮ್​ ಮ್ಯಾನೇಜ್ಮೆಂಟ್​ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಇಶಾನ್ ಹೆಚ್ಚಿನ ಸಮಯ ತಂಡದಲ್ಲಿಯೇ ಕಳೆದಿದ್ದಾರೆ. ಆದರೆ ಪ್ಲೇಯಿಂಗ್ ಇಲೆವನ್​ನಲ್ಲಿ ಸ್ಥಿರವಾದ ಭಾಗವಾಗಿರಲಿಲ್ಲ. ಕಿಶನ್​ 2023ರ ವಿಶ್ವಕಪ್‌ನಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದರು. ಉಳಿದ ಆಟವನ್ನು ಶುಬ್‌ಮನ್ ಗಿಲ್‌ ಭರ್ತಿ ಮಾಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ನಂತರದ ಟಿ-20ಐ ಸರಣಿಯ 5 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಕಿಶನ್ ಅವಕಾಶ ಪಡೆದಿದ್ದರು.

ಇದೀಗ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಗುಳಿದ ಕಿಶನ್ ಸ್ಥಾನವನ್ನು ಆಂಧ್ರಪ್ರದೇಶದ ವಿಕೆಟ್ ಕೀಪರ್, ಬ್ಯಾಟರ್ ಆದ ಕೆ.ಎಸ್. ಭರತ್ ತುಂಬಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಭರತ್​ ಮತ್ತೊಂದು ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net