

ನವದೆಹಲಿ: ಮಲೇಷ್ಯಾದ ಷಾ ಅಲಮ್ನಲ್ಲಿ ೆಬ್ರವರಿ 13ರಿಂದ 19ರವರೆಗೆ ನಡೆಯಲಿರುವ ಏಷ್ಯನ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮೊಣಕಾಲು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಒಲಿಂಪಿಕ್ಸ್ ಅವಳಿ ಪದಕ ವಿಜೇತೆ ಪಿವಿ ಸಿಂಧು ಸ್ಥಾನ ಸಂಪಾದಿಸಿದ್ದಾರೆ. ಈ ಮೂಲಕ 4 ತಿಂಗಳ ಬಳಿಕ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಫ್ರೆಂಚ್ ಓಪನ್ ವೇಳೆ ಗಾಯಗೊಂಡಿದ್ದ ಸಿಂಧು ನಂತರದಲ್ಲಿ ಯಾವುದೇ ಟೂರ್ನಿಯಲ್ಲಿ ಆಡಿಲ್ಲ. ವಿಶ್ವ ನಂ. 8 ಎಚ್ಎಸ್ ಪ್ರಣಯ್ ಪುರುಷರ ತಂಡದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಸಹೋದರರಾದ ಲಕ್ಷ್ಯ ಸೇನ್ ಮತ್ತು ಚಿರಾಗ್ ಸೇನ್ ತಂಡದಲ್ಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ರೇಸ್ನಲ್ಲಿ ಭಾರತೀಯ ಷಟ್ಲರ್ಗಳಿಗೆ ಈ ಟೂರ್ನಿ ಮಹತ್ವದ್ದಾಗಿದೆ.
ಭಾರತ ಪುರುಷರ ತಂಡ: ಪ್ರಣಯ್ ಎಚ್ಎಸ್, ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್, ಚಿರಾಗ್ ಸೇನ್, ಸಾತ್ವಿಕ್ ಸಾಯಿರಾಜ್, ಚಿರಾಗ್ ಶೆಟ್ಟಿ, ಧ್ರುವ ಕಪಿಲಾ, ಎಂಆರ್ ಅರ್ಜುನ್, ಸೂರಜ್ ಗೋಲ, ಪೃಥ್ವಿ ರಾಯ್.
ಮಹಿಳಾ ತಂಡ: ಪಿವಿ ಸಿಂಧು, ಅನ್ಮೋಲ್ ರ್ಖಬ್, ತನ್ವಿ ಶರ್ಮ, ಅಶ್ಮಿತಾ ಚಲಿಹ, ತ್ರಿಸಾ ಜೋಲಿ, ಗಾಯತ್ರಿ ಗೋಪಿಚಂದ್, ಅಶ್ವಿನಿ ಪೊನ್ನಪ್ಪ, ತನಿಷಾ ಕ್ರಾಸ್ಟೋ, ಪ್ರಿಯಾದೇವಿ ಕೊಂಜೆಂಗ್ಬಾಮ್, ಶ್ರುತಿ ಮಿಶ್ರಾ.