ಬ್ಯಾಂಕ್ ಸಾಲ ವಂಚನೆ ಪ್ರಕರಣ: ಹರಿಯಾಣ ಕಾಂಗ್ರೆಸ್ ಶಾಸಕನ ಮನೆ, ಕಾರ್ಖಾನೆ ಮೇಲೆ ಇಡಿ ದಾಳಿ

ed
Published on

ಚಂಡೀಗಡ: ಹರಿಯಾಣ ಕಾಂಗ್ರೆಸ್ ಶಾಸಕ ರಾವ್ ದಾನ್ ಸಿಂಗ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಗುರುವಾರ ದಾಳಿ ನಡೆಸಿದೆ.

1,392 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯ ತನಿಖೆ ಭಾಗವಾಗಿ ಈ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

ಮಹೇಂದ್ರಗಢ, ಹರಿಯಾಣದ ಬಹದ್ದೂರ್‌ಗಢ ಮತ್ತು ಗುರುಗ್ರಾಮ್, ದೆಹಲಿ ಮತ್ತು ಜೆಮ್‌ಶೆಡ್‌ಪುರ ಸೇರಿದಂತೆ ಸುಮಾರು 15 ಸ್ಥಳಗಳಲ್ಲಿ ಕೇಂದ್ರೀಯ ಸಂಸ್ಥೆಯ ಗುರುಗ್ರಾಮ್ ಕಚೇರಿಯಿಂದ ಶೋಧ ನಡೆಸಲಾಗುತ್ತಿದೆ. ಮಹೇಂದ್ರಗಢ ಕ್ಷೇತ್ರದ 65 ವರ್ಷದ ಶಾಸಕ ರಾವ್​ದಾನ್​ ಸಿಂಗ್​ ಪುತ್ರ ಅಕ್ಷತ್ ಸಿಂಗ್ ಕಂಪನಿ, ಅಲೈಡ್ ಸ್ಟ್ರಿಪ್ಸ್ ಲಿಮಿಟೆಡ್ (ಎಎಸ್​ಎಲ್​) ಮತ್ತು ಅದರ ಪ್ರವರ್ತಕ ಮೊಹಿಂದರ್ ಅಗರ್ವಾಲ್, ಗೌರವ್ ಅಗರ್ವಾಲ್ ಮತ್ತು ಇತರರ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

1,392 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಕಂಪನಿ ಭಾಗಿಯಾಗಿರುವ ಆರೋಪ ಹೊತ್ತಿದ್ದು, ಸಿಬಿಐ 2022ರಲ್ಲಿ ಪ್ರಕರಣ ದಾಖಲಿಸಿತ್ತು. ರಾವ್ ಡಾನ್ ಸಿಂಗ್ ಅವರ ಕುಟುಂಬ ಮತ್ತು ಅವರ ಕಂಪನಿಗಳು ಎಎಸ್‌ಎಲ್‌ನಿಂದ ಸಾಲವನ್ನು ಪಡೆದಿವೆ. ಆದರೆ ಅದನ್ನು ಹಿಂತಿರುಗಿಸಲಿಲ್ಲ. ನಂತರ ಇಡೀ ಸಾಲದ ಮೊತ್ತವನ್ನು ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net