ಬಾಂಗ್ಲಾ ಆಯ್ಕೆಗಾರನ ವಿರುದ್ಧ ಅಸಭ್ಯ ವರ್ತನೆ ಆರೋಪ ಮಾಡಿದ ಮಹಿಳಾ ಕ್ರಿಕೆಟರ್​ ಜಹಾನಾರಾ ಅಲಂ!

web alam
Published on

ಢಾಕಾ: ಬಾಂಗ್ಲಾದೇಶದ ಆಯ್ಕೆಗಾರನೊಬ್ಬ 20222ರ ಏಕದಿನ ವಿಶ್ವಕಪ್​ ವೇಳೆ ಅನುಚಿತವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮಹಿಳಾ ಕ್ರಿಕೆಟರ್​ ಜೊಹಾನಾರಾ ಅಲಂ ಆರೋಪಿಸಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ (ಬಿಸಿಬಿ) ಈ ಬಗ್ಗೆ ತನಿಖೆ ನಡೆಸಿ 15 ದಿನದೊಳಗೆ ವರದಿಯನ್ನು ಸಲ್ಲಿಸಲು ಸಮಿತಿಯೊಂದನ್ನು ನೇಮಿಸಿದೆ.

ಪ್ರಸಕ್ತ ಆಸ್ಟ್ರೆಲಿಯಾದಲ್ಲಿ ನೆಲೆಸಿರುವ ಜಹಾನಾರಾ, ಮಹಿಳಾ ತಂಡದ ಆಯ್ಕೆಗಾರನೊಬ್ಬ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಅಶ್ಲೀಲ ಪ್ರಶ್ನೆಗಳನ್ನು ಕೇಳುತ್ತಿದ್ದನು. ಬಿಸಿಬಿಯ ಕೆಲ ಅಧಿಕಾರಿಗಳೂ ಅನುಚಿತವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಬಿಸಿಬಿಯ ಹಿಂದಿನ ನಿರ್ದೇಶಕ ಶಫಿಯುಲ್​ ಇಸ್ಲಾಂ ಮತ್ತು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಜಾಮುದ್ದೀನ್​ ಚೌಧರಿಗೆ ಈ ಬಗ್ಗೆ ದೂರನ್ನೂ ನೀಡಿದ್ದೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಬಾಂಗ್ಲಾ ಪರ ಒಟ್ಟು 135 ಪಂದ್ಯ ಆಡಿರುವ ಅವರು 108 ವಿಕೆಟ್​ ಕಬಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net