ಮಾಜಿ ವಿಶ್ವ ಟೆಸ್ಟ್ ಚಾಂಪಿಯನ್ ಕಿವೀಸ್ ಎದುರು ಮೇಲುಗೈ ಸಾಧಿಸಿದ ಬಾಂಗ್ಲಾದೇಶ: ಮೊದಲ ದಿನವೇ 15 ವಿಕೆಟ್ ಪತನ

New-Project-4-1
Published on

ಮೀರ್ಪುರ: ಮೊದಲ ದಿನವೇ 15 ವಿಕೆಟ್ ಪತನಕ್ಕೆ ಸಾಕ್ಷಿಯಾದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಮೇಲುಗೈ ಸಾಧಿಸಿದೆ.

ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾ, 66.2 ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಕಿವೀಸ್ ಆರಂಭಿಕ ಆಘಾತ ಅನುಭವಿಸಿ ದಿನದಂತ್ಯಕ್ಕೆ 12.4 ಓವರ್‌ಗಳಲ್ಲಿ 5 ವಿಕೆಟ್‌ಗೆ 55 ರನ್ ಕಲೆಹಾಕಿದ್ದು, ಸದ್ಯ 117 ರನ್‌ಗಳ ಹಿನ್ನಡೆಯಲ್ಲಿದೆ. ಡೆರಿಲ್ ಮಿಚೆಲ್ (12*) ಹಾಗೂ ಗ್ಲೆನ್ ಫಿಲಿಪ್ಸ್ (5*) ಕ್ರೀಸ್‌ನಲ್ಲಿದ್ದಾರೆ. ಮಂದಬೆಳಕಿನ ಕಾರಣ ದಿನದಾಟವನ್ನು ಬೇಗನೆ ಅಂತ್ಯಗೊಳಿಸಲಾಯಿತು.

ಬಾಂಗ್ಲಾದೇಶ: 66.2 ಓವರ್‌ಗಳಲ್ಲಿ 172 (ಮಹಮುದುಲ್ಲಾ 14, ಮುಶ್ಫೀಕರ್ 35, ಶಾಹದತ್ 31, ಮೆಹಿದಿ 20, ಗ್ಲೆನ್ ಫಿಲಿಪ್ಸ್ 31ಕ್ಕೆ 3, ಸ್ಯಾಂಟ್ನರ್ 65ಕ್ಕೆ 3). ನ್ಯೂಜಿಲೆಂಡ್: 12.4 ಓವರ್‌ಗಳಲ್ಲಿ 5 ವಿಕೆಟ್‌ಗೆ 55 (ಕಾನ್‌ವೇ 11, ವಿಲಿಯಮ್ಸನ್ 13, ಡೆರಿಲ್ 12*, ಫಿಲಿಪ್ಸ್ 5*, ಮೆಹಿದಿ 17ಕ್ಕೆ 3, ತೈಜುಲ್ 29ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net