ಟಿ20 ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶಕ್ಕೆ ಮೊದಲ ಗೆಲುವು

bangla web
Published on

ಢಾಕಾ: ಎರಡನೇ ಸ್ತರದ ತಂಡದೊಂದಿಗೆ ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್, ಮೊದಲ ಟಿ20 ಪಂದ್ಯದಲ್ಲಿ ಆಘಾತ ಎದುರಿಸಿದೆ. 5 ಪಂದ್ಯಗಳ ಸರಣಿಯಲ್ಲಿ ಆತಿಥೇಯ ಬಾಂಗ್ಲಾ 1-0 ಮುನ್ನಡೆ ಸಾಧಿಸಿದೆ. ಇದು ಟಿ20 ಕ್ರಿಕೆಟ್‌ನಲ್ಲಿ ಕಿವೀಸ್ ವಿರುದ್ಧ ಬಾಂಗ್ಲಾಕ್ಕೆ ಮೊದಲ ಗೆಲುವಾಗಿದೆ. ಈ ಹಿಂದಿನ 10 ಮುಖಾಮುಖಿಗಳಲ್ಲೂ ಬಾಂಗ್ಲಾ ಸೋತಿತ್ತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಟಾಮ್ ಲಾಥಮ್ ಸಾರಥ್ಯದ ಕಿವೀಸ್, 16.5 ಓವರ್‌ಗಳಲ್ಲಿ ಕೇವಲ 60 ರನ್‌ಗೆ ಆಲೌಟ್ ಆಯಿತು. ಇದು ಟಿ20 ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ನ ಕನಿಷ್ಠ ಮೊತ್ತವಾಗಿದೆ. ಪ್ರತಿಯಾಗಿ ಬಾಂಗ್ಲಾ 15 ಓವರ್‌ಗಳಲ್ಲಿ 3 ವಿಕೆಟ್‌ಗೆ 62 ರನ್ ಗಳಿಸಿ ಜಯಿಸಿತು.

ನ್ಯೂಜಿಲೆಂಡ್: 16.5 ಓವರ್‌ಗಳಲ್ಲಿ 60 (ಲಾಥಮ್ 18, ಗ್ರಾಂಡ್‌ಹೋಮ್ 1, ನಿಕೋಲ್ಸ್ 18, ಮುಸ್ತಾಫಿಜುರ್ 13ಕ್ಕೆ 3, ಸೈುದ್ದೀನ್ 7ಕ್ಕೆ 2, ಶಕೀಬ್ 10ಕ್ಕೆ 2), ಬಾಂಗ್ಲಾದೇಶ: 15 ಓವರ್‌ಗಳಲ್ಲಿ 3 ವಿಕೆಟ್‌ಗೆ 62 (ಶಕೀಬ್ 25, ಮುಶ್ಫಿಕರ್ ರಹೀಂ 16*, ಮಹಮದುಲ್ಲಾ 14*, ರಚಿನ್ ರವೀಂದ್ರ 21ಕ್ಕೆ 1, ಅಜಾಜ್ 7ಕ್ಕೆ 1). ಪಂದ್ಯಶ್ರೇಷ್ಠ: ಶಕೀಬ್ ಅಲ್ ಹಸನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net