Champions Trophy: ನ್ಯೂಜಿಲೆಂಡ್, ಬಾಂಗ್ಲಾದೇಶ ತಂಡ ಪ್ರಕಟ, ಶಕೀಬ್, ಲಿಟನ್ ಔಟ್

New Project (1)
Published on

ಢಾಕಾ: ವಿವಾದಾತ್ಮಕ ಬೌಲಿಂಗ್ ಶೈಲಿಯಿಂದಾಗಿ ಅಂತಾರಾಷ್ಟ್ರೀಯ ಹಾಗೂ ದೇಶೀಯ ಟೂರ್ನಿಯಲ್ಲಿ ಬೌಲಿಂಗ್ ನಿಷೇಧಕ್ಕೆ ಒಳಗಾಗಿರುವ ಆಲ್ರೌಂಡರ್ ಶಕೀಬ್ ಅಲ್ ಹಸನ್ ಮತ್ತು ಕಳಪೆ ಾರ್ಮ್‌ನಲ್ಲಿರುವ ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ಲಿಟನ್ ದಾಸ್ ಚಾಂಪಿಯನ್ಸ್ ಟ್ರೋಫಿಗೆ ಬಾಂಗ್ಲಾದೇಶ ತಂಡದಿಂದ ಹೊರಬಿದ್ದಿದ್ದಾರೆ. ನಜ್ಮೂಲ್ ಹೊಸೈನ್ ಶಾಂಟೋ ತಂಡ ಮುನ್ನಡೆಸಲಿದ್ದಾರೆ.

ತಂಡ: ನಜ್ಮೂಲ್ ಹೊಸೈನ್ ಶಾಂಟೋ (ನಾಯಕ), ಮುಶ್ಫೀಕರ್ ರಹೀಂ(ವಿ.ಕೀ), ತೌಹೀದ್ ಹೃದೂಯ್, ಸೌಮ್ಯ ಸರ್ಕಾರ್, ತಂಜಿದ್ ಹಸನ್, ಜೇಕರ್ ಅಲಿ, ಮೆಹಿದಿ ಹಸನ್ ಮಿರಾಜ್, ರಿಷಾದ್ ಹೊಸೈನ್, ಟಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಪರ್ವೇಜ್ ಹೊಸೈನ್, ನಸುಮ್ ಅಹ್ಮದ್, ತಂಜಿಮ್ ಹಸನ್, ನಹೀದ್ ರಾಣಾ.

ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಿರುವ 37 ವರ್ಷದ ಶಕೀಬ್, ಕಳೆದ ಸೆಪ್ಟೆಂಬರ್‌ನಲ್ಲಿ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ವಿವಾದಾತ್ಮಕ ಬೌಲಿಂಗ್ ಶೈಲಿಗೆ ಸುಳಿಗೆ ಸಿಲುಕಿದರು. ಬಳಿಕ ಇಂಗ್ಲೆಡ್ ಹಾಗೂ ಚೆನ್ನೈನಲ್ಲಿ ನಡೆದ ಪರೀಕ್ಷೆಯಲ್ಲೂ ಅನುತೀರ್ಣಗೊಂಡಿದ್ದರು. ಅವರನ್ನು ಬಾಂಗ್ಲಾದೇಶ 15 ಆಟಗಾರರ ತಂಡದಿಂದ ಕೈಬಿಡಲಾಗಿರುವ ಮತ್ತೋರ್ವ ಆಟಗಾರ. ಕಳಪೆ ಾರ್ಮ್‌ನಿಂದಾಗಿ ಲಿಟನ್ ಸ್ಥಾನ ವಂಚಿತರಾಗಿದ್ದು,

ನ್ಯೂಜಿಲೆಂಡ್‌ಗೆ ಸ್ಯಾಂಟ್ನರ್ ಸಾರಥ್ಯ

ವೆಲ್ಲಿಂಗ್ಟನ್: ೆಬ್ರವರಿ 19ರಂದು ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ 15 ಆಟಗಾರರ ನ್ಯೂಜಿಲೆಂಡ್ ತಂಡವನ್ನು ಹೆಸರಿಸಿದ್ದು, ವೇಗಿಗಳಾದ ಲಾಕಿ ರ್ಗ್ಯುಸನ್ ಹಾಗೂ ಬೆನ್ ಸಿರ್ಸ್ ಪುನರಾಗಮನ ಕಂಡಿದ್ದಾರೆ. ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಕಿವೀಸ್ ತಂಡ ಮುನ್ನಡೆಸಲಿದ್ದಾರೆ.

ಅನುಭವಿ ಹಾಗೂ ಯುವ ಆಟಗಾರರಿಂದ ಕೂಡಿರುವ ತಂಡದಲ್ಲಿ ಬೆನ್ ಸಿರ್ಸ್, ವಿಲ್ ಓರೂರ್ಕಿ ಹಾಗೂ ನಥಾನ್ ಸ್ಮಿತ್‌ಗೆ ಇದು ಮೊದಲ ಐಸಿಸಿ ಟೂರ್ನಿಯಾಗಿದ್ದು, 2000ರಲ್ಲಿ ಮೊದಲ ಬಾರಿಗೆ ನಡೆದ ಐಸಿಸಿ ನಾಕೌಟ್ ಟ್ರೋಫಿಯಲ್ಲಿ (ಈಗಿನ ಚಾಂಪಿಯನ್ಸ್ ಟ್ರೋಫಿ) ನ್ಯೂಜಿಲೆಂಡ್ ಚಾಂಪಿಯನ್ ಆಗಿತ್ತು. ಾಜಿ ನಾಯಕ ಕೇನ್ ವಿಲಿಯಮ್ಸನ್ ಸತತ ಮೂರನೇ ಬಾರಿಗೆ ಟೂರ್ನಿಯಲ್ಲಿ ಕಿವೀಸ್ ತಂಡ ಪ್ರತಿನಿಧಿಸಲಿದ್ದಾರೆ.

ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಡೆವೋನ್ ಕಾನ್ ವೇ, ರಚಿನ್ ರವೀಂದ್ರ, ಮಾರ್ಕ್ ಚಾಪ್‌ಮನ್, ಡೆರಿಲ್ ಮಿಚೆಲ್, ಕೇನ್ ವಿಲಿಯಮ್ಸನ್, ಟಾಮ್ ಲಾಥಮ್, ಗ್ಲೆನ್ ಫಿಲಿಪ್ಸ್, ನಥಾನ್ ಸ್ಮಿತ್, ವಿಲ್ ಯಂಗ್, ಮ್ಯಾಟ್ ಹೆನ್ರಿ, ಲಾಕಿ ರ್ಗ್ಯುಸನ್, ಮೈಕೆಲ್ ಬ್ರೇಸ್‌ಬೆಲ್, ವಿಲ್ ಒರೂರ್ಕಿ, ಬೆನ್ ಸಿರ್ಸ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net