ಬಾಂಗ್ಲಾದೇಶ ಅಂತಿಮ ಪಂದ್ಯಕ್ಕೆ ಶಕೀಬ್ ಅಲಭ್ಯ: ಬದಲಿ ಆಟಗಾರ ತಂಡ ಸೇರ್ಪಡೆ

New-Project-40
Published on

ನವದೆಹಲಿ: ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಗಾಯದ ಸಮಸ್ಯೆಯಿಂದಾಗಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಿಂದ ಹೊರಗುಳಿದಿದ್ದಾರೆ. ಬದಲಿ ಆಟಗಾರನಾಗಿ ಅನಾಮುಲ್ ಹಕ್ ಬಿಜೋಯ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಶಕೀಬ್ ಅನುಪಸ್ಥಿತಿಯಲ್ಲಿ ನಜ್ಮೂಲ್ ಹೊಸೈನ್ ಶಾಂಟೋ ತಂಡವನ್ನು ಮುನ್ನಡೆಸಲಿದ್ದಾರೆ. ಶ್ರೀಲಂಕಾ ವಿರುದ್ಧ ಗೆದ್ದು ಚಾಂಪಿಯನ್ಸ್ ಟ್ರೋಫಿ ಅರ್ಹತೆ ಆಸೆ ಜೀವಂತವಿರಿಸಿರುವ ಬಾಂಗ್ಲಾದೇಶಕ್ಕೆ ಶಕೀಬ್ ಅಲಭ್ಯತೆ ಹಿನ್ನಡೆ ಎನಿಸಿದೆ. ಬಾಂಗ್ಲಾ ಶನಿವಾರ ಆಸ್ಟ್ರೇಲಿಯಾ ಎದುರು ತನ್ನ ಕೊನೇ ಪಂದ್ಯವನ್ನಾಡಲಿದೆ. ಲಂಕಾ ವಿರುದ್ಧ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಎಡಗೈ ತೋರು ಬೆರಳಿನ ಗಾಯಕ್ಕೆ ತುತ್ತಾಗಿದ್ದ ಶಕೀಬ್, ನೋವು ನಿವಾರಕ ಮಾತ್ರೆ ಸೇವಿಸಿ ಬ್ಯಾಟಿಂಗ್ ಮುಂದುವರಿಸಿದ್ದರು. ಪಂದ್ಯದ ನಂತರ ಎಕ್ಸೃ್-ರೇ ಪರೀಕ್ಷೆಗೆ ಒಳಪಡಿಸಿದಾಗ ಬೆರಳಿನ ಮುರಿತ ಕಂಡು ಬಂದಿದೆ. ಚೇತರಿಕೆಗೆ 3-4 ವಾರಗಳ ವಿಶ್ರಾಂತಿ ಅಗತ್ಯವಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net