

ಮಸ್ಕತ್: ಕ್ರೀಸ್ ಗ್ರೇವ್ಸ್ (45ರನ್, 28 ಎಸೆತ, 4 ಬೌಂಡರಿ, 2 ಸಿಕ್ಸರ್, 19ಕ್ಕೆ 2) ಆಲ್ರೌಂಡ್ ನಿರ್ವಹಣೆ ನೆರವಿನಿಂದ ಸ್ಕಾಟ್ಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿ ಮೊದಲ ಸುತ್ತಿನ ತನ್ನ ಮೊದಲ ಹಣಾಹಣಿಯಲ್ಲಿ ಬಾಂಗ್ಲಾದೇಶ ತಂಡಕ್ಕೆ ಆಘಾತ ನೀಡಿತು. ಭಾನುವಾರ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ 6 ರನ್‌ಗಳಿಂದ ಜಯ ದಾಖಲಿಸಿತು. ಕಡೇ ಓವರ್‌ನಲ್ಲಿ ಬಾಂಗ್ಲಾದೇಶ ತಂಡದ ಗೆಲುವಿಗೆ 24 ರನ್ ಅವಶ್ಯಕತೆಯಿತ್ತಾದರೂ ಮಹೆದಿ ಹಸನ್ (13*ರನ್, 5 ಎಸೆತ, 1 ಬೌಂಡರಿ, 1 ಸಿಕ್ಸರ್) ಹಾಗೂ ಮೊಹಮದ್ ಸೈುದೀನ್ (5*ರನ್, 2 ಎಸೆತ, 1 ಬೌಂಡರಿ) ಪ್ರತಿಹೋರಾಟ ನಡೆಸಿದರೂ 17 ರನ್ ಪೇರಿಸಲಷ್ಟೇ ಶಕ್ತರಾದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಸ್ಕಾಟ್ಲೆಂಡ್ ತಂಡ, ಕ್ರೀಸ್ ಗ್ರೇವ್ಸ್ ಹಾಗೂ ಮಾರ್ಟ್ ವ್ಯಾಟ್ (22ರನ್, 17 ಎಸೆತ, 2 ಬೌಂಡರಿ) ಬಿರುಸಿನ ಬ್ಯಾಟಿಂಗ್ ಫಲವಾಗಿ 9 ವಿಕೆಟ್‌ಗೆ 140 ರನ್ ಪೇರಿಸಿತು. ಪ್ರತಿಯಾಗಿ ಬ್ರಾಡ್ ವೀಲ್ (24ಕ್ಕೆ 3) ಹಾಗೂ ಕ್ರೀಸ್ ಗ್ರೇವ್ಸ್ ನೀಡಿದ ಆಘಾತಕ್ಕೆ ತತ್ತರಿಸಿದ ಬಾಂಗ್ಲಾದೇಶ ತಂಡ 7 ವಿಕೆಟ್‌ಗೆ 134 ರನ್‌ಗಳಿಸಲಷ್ಟೇ ಶಕ್ತವಾಯಿತು.
ಸ್ಕಾಟ್ಲೆಂಡ್: 9 ವಿಕೆಟ್‌ಗೆ 140 (ಕ್ರೀಸ್ ಗ್ರೇವ್ಸ್ 45, ಮಾರ್ಕ್ ವ್ಯಾಟ್ 22, ಮೆಹೆದಿ ಹಸನ್ 19ಕ್ಕೆ 3, ಶಕೀಬ್ ಅಲ ಹಸನ್ 17ಕ್ಕೆ 2), ಬಾಂಗ್ಲಾದೇಶ: 7 ವಿಕೆಟ್‌ಗೆ 134 (ಶಕೀಬ್ ಅಲ್ ಹಸನ್ 20, ಮುಶ್ಫಿಕರ್ ರಹೀಮ್ 38, ಮಹಮದುಲ್ಲಾ 23, ಬ್ರಾಡ್ ವೀಲ್ 24ಕ್ಕೆ 3, ಕ್ರೀಸ್ ಗ್ರೇವ್ಸ್ 19ಕ್ಕೆ 2).