ನಿಷೇಧದ ಶಿಕ್ಷೆ ಮುಗಿಸಿದ ಬಾಂಗ್ಲಾ ಆಲ್ರೌಂಡರ್

shakib for web
Published on

ಢಾಕಾ: ಭ್ರಷ್ಟಾಚಾರ ನಿಗ್ರಹ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಬಾಂಗ್ಲಾದೇಶದ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಅವರ ಒಂದು ವರ್ಷದ ನಿಷೇಧ ಶಿಕ್ಷೆಯ ಅವಧಿ ಗುರುವಾರಕ್ಕೆ ಅಂತ್ಯವಾಗಲಿದೆ. ಶಕೀಬ್ ಅಲ್ ಹಸನ್ ಅವರನ್ನು ಒಂದು ವರ್ಷ ಅಮಾನತು ಸೇರಿದಂತೆ 2 ವರ್ಷಗಳ ಕಾಲ ನಿಷೇಧದ ಶಿಕ್ಷೆ ವಿಧಿಸಲಾಗಿತ್ತು. ಕಳೆದ ಅಕ್ಟೋಬರ್ 29 ರಂದು ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳ ಅಕ್ಟೋಬರ್ 29 ರಂದು ಶಿಕ್ಷೆ ವಿಧಿಸಿತ್ತು. ಭಾರತೀಯ ಮೂಲದ ಬುಕ್ಕಿಯೊರ್ವ ಪದೆ ಪದೇ ಸಂಪರ್ಕಿಸಿದರೂ ಎಸಿಯೂಗೆ ವರದಿ ನೀಡಲು ಶಕೀಬ್ ಹಿಂದೇಟು ಹಾಕಿದ್ದರು. ಬಳಿಕ ಬುಕ್ಕಿ ಪದೆ ಪದೆ ಭ್ರಷ್ಟಾಚಾರಕ್ಕೆ ಒತ್ತಾಯಿಸಿದನ್ನು ಶಕೀಬ್ ತಪ್ಪೊಪ್ಪಿಕೊಂಡಿದ್ದರು.

ಇದೀಗ ಶಕೀಬ್ ಆಗಮನಕ್ಕೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಕಾಯುತ್ತಿದೆ. ತಂಡದ ಡ್ರೆಸ್ಸಿಂಗ್ ಕೊಠಡಿಗೆ ಸ್ವಾಗತ ಟಿ20 ತಂಡದ ನಾಯಕ ಮೊಹಮದುಲ್ಲಾ ಹೇಳಿದ್ದಾರೆ. ನಮ್ಮ ಹುಡುಗ ತಂಡಕ್ಕೆ ವಾಪಸಾಗುತ್ತಿದ್ದಾನೆ. ಇದು ದೇಶೀಯ ಕ್ರಿಕೆಟ್‌ಗೆ ಸಂತೋಷದ ವಿಷಯ. ರಾಷ್ಟ್ರೀಯ ತಂಡದಲ್ಲಿ ಅವರೊಬ್ಬ ಅತ್ಯುತ್ತಮ ಆಟಗಾರ, ಅವರ ಆಗಮನದ ನಿರೀಕ್ಷೆಯಲ್ಲಿದ್ದೇವೆ ಎಂದು ಮೊಹಮದುಲ್ಲಾ ಹೇಳಿದ್ದಾರೆ. 33 ವರ್ಷದ ಶಕೀಬ್ ಸದ್ಯ ಕುಟುಂಬ ಸದಸ್ಯರೊಂದಿಗೆ ಯುಎಸ್‌ಎ ಪ್ರವಾಸದಲ್ಲಿದ್ದು, ಮುಂದಿನ ತಿಂಗಳು ತವರಿಗೆ ವಾಪಸಾಗುವ ಸಾಧ್ಯತೆಗಳಿವೆ.

ಶಕೀಬ್ ಅಲ್ ಹಸನ್ ಬಾಂಗ್ಲಾದೇಶದ ಪರ 58 ಟೆಸ್ಟ್ ಪಂದ್ಯಗಳಿಂದ 5 ಶತಕ ಸೇರಿದಂತೆ 3862 ರನ್ ಬಾರಿಸಿದ್ದು, 210 ವಿಕೆಟ್ ಕಬಳಿಸಿದ್ದಾರೆ. 206 ಏಕದಿನ ಪಂದ್ಯಗಳಿಂದ 9 ಶತಕ ಸೇರಿದಂತೆ 6323 ರನ್‌ಗಳಿಸಿ, 260 ವಿಕೆಟ್ ಪಡೆದಿದ್ದಾರೆ. 76 ಟಿ20 ಪಂದ್ಯಗಳಿಂದ 1567ರನ್, 92 ವಿಕೆಟ್ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net