ಬೆಂಗಳೂರು ಮಾರ್ಸ್ ತಂಡಕ್ಕೆ ಸುಲಭ ಜಯ

BANGALORE
Published on

ಬೆಂಗಳೂರು: ಜಾನ್ (13, 16, 72ನೇ ನಿಮಿಷ) ಸಿಡಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಬೆಂಗಳೂರು ಮಾರ್ಸ್ ತಂಡ ಬಿಡಿಎಫ್​ಎ ಬಿ ಡಿವಿಷನ್ ಫುಟ್​ಬಾಲ್ ಟೂರ್ನಿ ಪಂದ್ಯದಲ್ಲಿ ಜಯ ದಾಖಲಿಸಿತು. ಅಶೋಕನಗರದ ರಾಜ್ಯ ಫುಟ್​ಬಾಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಮಾರ್ಸ್ ತಂಡ 3-2 ಗೋಲುಗಳಿಂದ ತಿಲಕ್ ಮೊಮೋರಿಯಲ್ ತಂಡವನ್ನು ಸೋಲಿಸಿತು.

ಪರಾಜಿತ ತಂಡದ ಪರ ಅನಿಶ್ (60), ಮನೋಜ್ (64) ತಲಾ ಒಂದು ಗೋಲು ಗಳಿಸಿದರು. ದಿನದ ಮತ್ತೊಂದು ಪಂದ್ಯದಲ್ಲಿ ಫ್ರೆಂಡ್ಸ್ ಯುನೈಟೆಡ್ ಎಫ್​ಸಿ 6-1 ವೆಹಿಕಲ್ಸ್ ಎಫ್​ಸಿ ತಂಡವನ್ನು ಸೋಲಿಸಿತು. ಮಂಗಳವಾರದ ಪಂದ್ಯಗಳು: ಸನ್​ರೈಸ್ ಎಫ್​ಸಿ-ಡಿವೈಇಎಸ್ ಎಫ್​ಸಿ (ಮ.2ಕ್ಕೆ), ಎಚ್​ಎಎಲ್ ಎಫ್​ಸಿ-ಬ್ಲಿಟ್ಜ ಎಫ್​ಸಿ (ಮ.3.30ಕ್ಕೆ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net