ರಾಜ್ಯಮಟ್ಟದ ನೆಟ್​ಬಾಲ್​ ಟೂರ್ನಿಯಲ್ಲಿ ಬೆಂಗಳೂರು ನಗರ, ದಕ್ಷಿಣ ಕನ್ನಡ ಚಾಂಪಿಯನ್​

web net
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಬೆಂಗಳೂರು ನಗರ ನೆಟ್​ಬಾಲ್​ ಅಸೋಸಿಯೇಷನ್​ ಹಾಗೂ ಯುನಿಕ್​ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ 5ನೇ ಸೀನಿಯರ್​ ನೆಟ್​ಬಾಲ್​ ಚಾಂಪಿಯನ್​ಷಿಪ್​ ಭಾನುವಾರ ಮುಕ್ತಾಯಗೊಂಡಿದ್ದು, ಪುರುಷರ ವಿಭಾಗದಲ್ಲಿ ದಕ್ಷಿಣ ಕನ್ನಡ ಹಾಗೂ ಮಹಿಳಾ ವಿಭಾಗದಲ್ಲಿ ಬೆಂಗಳೂರು ನಗರ ತಂಡಗಳು ಪ್ರಶಸ್ತಿ ಜಯಿಸಿವೆ.

ಪುರುಷರ ವಿಭಾಗದ ಫೈನಲ್​ನಲ್ಲಿ ದ. ಕನ್ನಡ ತಂಡ 20-15ರಿಂದ ಬೆಂಗಳೂರು ನಗರ ತಂಡವನ್ನು ಮಣಿಸಿದರೆ, ಮಹಿಳಾ ವಿಭಾಗದಲ್ಲಿ ಬೆಂಗಳೂರು ನಗರ ತಂಡ 25-24ರಿಂದ ದಣ ಕನ್ನಡವನ್ನು ಮಣಿಸಿ ಚಾಂಪಿಯನ್​ ಆಗಿ ಹೊರಹೊಮ್ಮಿವೆ. ಹಾಸನ, ಚಾಮರಾಜನಗರ ಹಾಗೂ ರಾಮನಗರ, ಮೈಸೂರು ತಂಡಗಳು ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net