ಬೆಂಗಳೂರಿನ ಗ್ಯಾರೇಜ್ ಕೆಲಸಗಾರ ನಾರಾಯಣ ಸ್ವಾಮಿ ಈಗ ಎಫ್‌ಎಂಎಸ್‌ಸಿಐ ನ್ಯಾಷನಲ್ ಡ್ರ್ಯಾಗ್ ರೇಸಿಂಗ್ ಚಾಂಪಿಯನ್‌

web race
Published on

ಬೆಂಗಳೂರು: ಡಿಸೆಂಬರ್ 20-22ರಂದು ಹೊಸೂರಿನ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್‌ನಲ್ಲಿ ನಡೆದ ಎಫ್‌ಎಂಎಸ್‌ಸಿಐ ಹಾಗು ವ್ರೂಮ್ ಡ್ರ್ಯಾಗ್ ಮೀಟ್‌ನ 11ನೇ ಆವೃತ್ತಿಯಲ್ಲಿ ಸ್ವಯಂ ಕಲಿತ ಡ್ರ್ಯಾಗ್ ರೇಸರ್ ಬೆಂಗಳೂರಿನ ನಾರಾಯಣ ಸ್ವಾಮಿ ಪ್ರಶಸ್ತಿ ಜಯಿಸಿದ್ದಾರೆ.

ಸಂಪಿಗೆಹಳ್ಳಿ ಜಕ್ಕೂರಿನಲ್ಲಿ ಹುಟ್ಟಿ ಬೆಳೆದ ನಾರಾಯಣ ಸ್ವಾಮಿ ಗ್ಯಾರೇಜ್ ಕೆಲಸಗಾರ (ಮೆಕ್ಯಾನಿಕ್) ಆಗಿದ್ದು, ಪ್ರಥಮ ಸ್ಥಾನವನ್ನು ಗಳಿಸಿ ರಾಷ್ಟ್ರದ ಮೋಟರ್‌ಸ್ಪೋರ್ಟ್ಸ್​​ನಲ್ಲಿ ಗಮನಾರ್ಹ ಸಾಧನೆ ತೋರಿದರು.

ಈ ಚಾಂಪಿಯನ್‌ಷಿಪ್ ಗೆಲ್ಲುವ ನನ್ನ ಕನಸು ನನಸಾಗಿದೆ. ಸರಳ ಆರಂಭಗಳಿಂದ ರಾಷ್ಟ್ರೀಯ ಚಾಂಪಿಯನ್ ಎಂಬ ಬಿರುದನ್ನು ಪಡೆಯುವವರೆಗೆ ಇದು ಹಠ ಮತ್ತು ಕಠಿಣ ಪರಿಶ್ರಮದ ಗೆಲುವಾಗಿದೆ ಎಂದು ನಾರಾಯಣ ಸ್ವಾಮಿ ಗೆಲುವಿನ ಬಗ್ಗೆ ಸಂಭ್ರಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net