

ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪೂನಿಯ ದೇಶಕ್ಕೆ ಮತ್ತೊಂದು ಪದಕ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ನಡೆದ ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಪಂದ್ಯದಲ್ಲಿ ಕಜಾಕಿಸ್ತಾನದ ದೌಲೆಟ್ ನಿಯಾಜ್ಬೆಕಾವ್ ವಿರುದ್ಧ 8-0 ಸ್ಕೋರ್ ಪಡೆದ ಪೂನಿಯ, ಕಂಚಿನ ಪದಕ ಗೆದ್ದಿದ್ದಾರೆ.
ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ 6 ಪದಕಗಳು ಲಭಿಸಿದ ಹಾಗಾಗಿದೆ.
ಸೆಮಿಫೈನಲ್ಸ್ನಲ್ಲಿ ಇರಾನಿನ ಹಾಜಿ ಅಲಿಯೇವ್ ವಿರುದ್ಧ ಸೋತಿದ್ದ ಬಜರಂಗ್ ಪೂನಿಯಾ, ಚಿನ್ನಕ್ಕಾಗಿ ಕಾದಾಡುವ ಅವಕಾಶ ಕಳೆದುಕೊಂಡಿದ್ದರು. ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಉತ್ತಮ ಆಟಗಾರಿಕೆ ಪ್ರದರ್ಶಿಸಿ, ಭಾರತಕ್ಕೆ ಆರನೇ ಪದಕವನ್ನು ಗೆದ್ದಿದ್ದಾರೆ. (ಏಜೆನ್ಸೀಸ್)