

ನವದೆಹಲಿ: ನವೆಂಬರ್ 19ರಿಂದ ಕತಾರ್ನ ದೋಹಾದಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಏಕದಿನ ಟೂರ್ನಿಗೆ ಭಾರತ ಎ ತಂಡದಲ್ಲಿ ಏಕೈಕ ಬದಲಾವಣೆ ಮಾಡಲಾಗಿದೆ. ತಂಡದ ಉಪನಾಯಕರಾಗಿ ಸ್ಥಾನ ಪಡೆದಿದ್ದ ಆರ್ಸಿಬಿ ನಾಯಕ ಹಾಗೂ ಮಧ್ಯಪ್ರದೇಶದ ಬ್ಯಾಟರ್ ರಜತ್ ಪಾಟೀದಾರ್ ಗಾಯದಿಂದಾಗಿ ಅಲಭ್ಯರಾಗಿದ್ದಾರೆ.
ಗಾಯದ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಿರುವ ಪಾಟೀದಾರ್, ಏಕದಿನ ಕ್ರಿಕೆಟ್ ಆಡುವಷ್ಟು ನಾನು ಫಿಟ್ ಆಗಿಲ್ಲ ಎಂದು ತಿಳಿಸಿದ್ದಾರೆ. ಇದರಿಂದಾಗಿ ಅವರ ಬದಲಿಗೆ ದೆಹಲಿಯ ಬ್ಯಾಟರ್ ಆಯುಷ್ ಬಡೋನಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇದೇ ವೇಳೆ ತಂಡದ ಉಪನಾಯಕರಾಗಿ ರಿಂಕು ಸಿಂಗ್ಗೆ ಬಡ್ತಿ ನೀಡಲಾಗಿದೆ.
ಟೂರ್ನಿಯಲ್ಲಿ ನ.20ಕ್ಕೆ ನೇಪಾಳ ವಿರುದ್ಧ ಅಭಿಯಾನ ಆರಂಭಿಸಲಿರುವ ಭಾರತ ಎ ತಂಡ, ನ.22ಕ್ಕೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.