ವಿಶ್ವ ನಂ. 14 ತ್ರಿಸಾ ಜೋಲಿ-ಗಾಯತ್ರಿ ಗೋಪಿಚಂದ್ ಜೋಡಿ (Treesa Jolly and Gayatri Gopichand) ಮತ್ತೊಂದೆಡೆ ಮಲೇಷ್ಯಾದ ಒಂಗ್ ಕ್ಸಿನ್ ಯೀ&ಕಾರ್ಮೆನ್ ಟಿಂಗ್ ಜೋಡಿಯನ್ನು 21-11, 21-15 ನೇರಗೇಮ್ಗಳಿಂದ ಮಣಿಸಿ, ಸತತ 2ನೇ ವರ್ಷ ಪ್ರಶಸ್ತಿ ಜಯಿಸುವ ಸನಿಹ ತಲುಪಿದೆ. ಭುಜನೋವಿನಿಂದಾಗಿ ಗಾಯತ್ರಿ 5 ತಿಂಗಳ ಕಾಲ ವಿಶ್ರಾಂತಿ ಪಡೆದ ಬಳಿಕ ಮರಳಿ ಕಣಕ್ಕಿಳಿದಿರುವ ಭಾರತೀಯ ಜೋಡಿ, ಭಾನುವಾರ ಫೈನಲ್ನಲ್ಲಿ 8ನೇ ಶ್ರೇಯಾಂಕಿತ ಜಪಾನ್ನ ಕಹೊ ಒಸಾವಾ-ಮೈ ತನಬೆ ಜೋಡಿಯನ್ನು ಎದುರಿಸಲಿದೆ.