

ವಿಶಾಖಪಟ್ಟಣ: ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು (P
.V. Sindhu
), ತನ್ನದೇ ಹೆಸರಿನ ಕ್ರೀಡಾ ಶ್ರೇಷ್ಠತಾ ಕೇಂದ್ರಕ್ಕೆ ಬುಧವಾರ ಅಡಿಗಲ್ಲು ಹಾಕಿದರು. ವಿಶಾಖಪಟ್ಟಣ ಸಮೀಪದ ಅರಿಲೋವಾದಲ್ಲಿ ಸುಮಾರು ಎರಡು ಲಕ್ಷ ಚದರ ಅಡಿ ಜಾಗದಲ್ಲಿ ಈ ಕ್ರೀಡಾ ಶ್ರೇಷ್ಠತಾ ಕೇಂದ್ರ ನಿರ್ಮಾಣವಾಗಲಿದೆ. ಇದರಲ್ಲಿ ಬ್ಯಾಡ್ಮಿಂಟನ್ ಜತೆಗೆ ಟೇಬಲ್ ಟೆನಿಸ್, ಈಜು, ಶೂಟಿಂಗ್, ಫುಟ್ಬಾಲ್, ಬಾಸ್ಕೆಟ್ಬಾಲ್ ಮತ್ತು ಚೆಸ್ ತರಬೇತಿಯನ್ನೂ ನೀಡಲಾಗುತ್ತದೆ.
ಮೊದಲಿಗೆ ಬ್ಯಾಡ್ಮಿಂಟನ್ ಅಕಾಡೆಮಿಯಷ್ಟೇ ಆಗಬೇಕಾಗಿದ್ದ ಯೋಜನೆಯ ಬಗ್ಗೆ ಪಿವಿ ಸಿಂಧು, ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಜತೆಗೆ ಚರ್ಚಿಸಿದ ಬಳಿಕ ಇತರ ಕ್ರೀಡೆಗಳಿಗೂ ವಿಸ್ತಿರಿಸಿದ್ದರು.
ಪತಿ ವೆಂಕಟ ದತ್ತ ಸಾಯಿ ಜತೆಗೆ ದೋಹಾ, ಮಿಲಾನ್, ಆಸ್ಟ್ರೆಲಿಯಾದಲ್ಲಿನ ವಿಶ್ವ ದರ್ಜೆಯ ಕ್ರೀಡಾ ವ್ಯವಸ್ಥೆಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿ ಈ ಯೋಜನೆ ಸಿದ್ಧಪಡಿಸಲಾಗಿದ್ದು, 2028ರ ಮೇನಲ್ಲಿ ಪೂರ್ಣಗೊಳ್ಳಲಿದೆ.