30 ವರ್ಷದ ಸಿಂಧು ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ. 6 ಇಂಡೋನೇಷ್ಯಾದ ಪುತ್ರಿ ಕುಸುಮಾವರ್ದಿನಿ ವಿರುದ್ಧ 21-17, 21-18 ನೇರಗೇಮ್ಗಳಿಂದ ಗೆಲುವು ಸಾಧಿಸಿದರು.
ಸಾತ್ವಿಕ್-ಚಿರಾಗ್ ಜೋಡಿ ವಿಶ್ವ ನಂ. 25 ಮಲೇಷ್ಯಾದ ಚೆನ್ ಜಿ ಯಿ-ಪ್ರೆಸ್ಲೆ ಸ್ಮಿತ್ ವಿರುದ್ಧ 26-28, 21-15, 21-13ರಿಂದ ಗೆದ್ದು 2ನೇ ಸುತ್ತಿಗೇರಿತು. ಏಷ್ಯನ್ ಚಾಂಪಿಯನ್ಷಿಪ್ ಫೈನಲಿಸ್ಟ್ ಆಯುಷ್ ಶೆಟ್ಟಿ 21-11, 14-21, 12-21ರಿಂದ ಮಾಜಿ ವಿಶ್ವ ನಂ. 1 ಡೆನ್ಮಾರ್ಕ್ ತಾರೆ ವಿಕ್ಟರ್ ಅಕ್ಸೆಲ್ಸೆನ್ಗೆ ಶರಣಾದರು.