ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ಗಳಾದ ಸಾತ್ವಿಕ್-ಚಿರಾಗ್ ಶೆಟ್ಟಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ಶೋಹಿಬುಲ್ ಫಿಕ್ರಿ ಜೋಡಿಯನ್ನು 18-21, 21-17, 21-16 ಗೇಮ್ಗಳಿಂದ ಮಣಿಸಿದರು. ಹಾಲಿ ವಿಶ್ವ ನಂ. 4 ಸಾತ್ವಿಕ್-ಚಿರಾಗ್ ಮೊದಲ ಗೇಮ್ ಸೋತು ಹಿನ್ನಡೆ ಅನುಭವಿಸಿದರೂ, ನಂತರ ದಿಟ್ಟ ತಿರುಗೇಟು ನೀಡುವ ಮೂಲಕ ಒಂದು ಗಂಟೆ 13 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು.ಅವರು ಸಿಂಗಾಪುರದಲ್ಲಿ ಡಬಲ್ಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಜೋಡಿ ಎನಿಸಿದ್ದಾರೆ.
ಸಾತ್ವಿಕ್-ಚಿರಾಗ್ 2024ರಲ್ಲಿ ಥಾಯ್ಲೆಂಡ್ನಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದುಕೊಂಡಿದ್ದರು. ನಂತರ 4 ಟೂರ್ನಿಗಳಲ್ಲಿ ಅವರು ಫೈನಲ್ಗೇರಿದ್ದರೂ, ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಸಾತ್ವಿಕ್-ಚಿರಾಗ್ ಜೋಡಿ ಪ್ರಶಸ್ತಿ ಗೆಲುವಿನೊಂದಿಗೆ 70.30 ಲಕ್ಷ ರೂ. (74 ಸಾವಿರ ಅಮೆರಿಕನ್ ಡಾಲರ್) ಬಾಚಿಕೊಂಡಿತು.