

ಕಾನ್ಪುರ: ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ವಿಲವಾದ ಕಾರಣಕ್ಕೆ ಭಾರತೀಯ ಟೇಬಲ್ ಟೆನಿಸ್ ಫೆಡರೇಷನ್ (ಟಿಟಿಎಫ್ಐ) ಕ್ರೀಡಾ ಸಚಿವಾಲಯದಿಂದ ಅಮಾನತುಗೊಂಡಿರುವ ನಡುವೆಯೂ, ಯುಟಿಟಿ ರಾಷ್ಟ್ರೀಯ ರ‌್ಯಾಂಕಿಂಗ್ ಟಿಟಿ ಚಾಂಪಿಯನ್‌ಷಿಪ್ ನಿಗದಿಯಂತೆಯೇ ನಡೆಯಲಿದೆ.
ಭಾನುವಾರದಿಂದ ಎಂಟು ದಿನ ನಿಗದಿಯಾಗಿರುವ ಟೂರ್ನಿಯಲ್ಲಿ ಅಗ್ರ ತಾರೆಗಳ ಜತೆಗೆ 1,900 ಟಿಟಿ ಪಟುಗಳು 12 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದು, ಟೂರ್ನಿಯಲ್ಲಿ ಒಟ್ಟು 4,200 ಪಂದ್ಯಗಳು ನಡೆಯಲಿವೆ. ಅಮಾನತು ಆದೇಶವನ್ನು ಒಲಿಂಪಿಕ್ ಚಾರ್ಟರ್ ಅಡಿ ಮರು ಪರಿಶೀಲಿಸುವಂತೆ ಟಿಟಿಎಫ್ಐ, ಕ್ರೀಡಾಸಚಿವಾಲಯವನ್ನು ಒತ್ತಾಯಿಸಿದೆ. 11, 13, 17 ಮತ್ತು 19 ವಯೋಮಿತಿ ಜತೆಗೆ ಹಿರಿಯರ ವಿಭಾಗದಲ್ಲಿ ಸ್ಪರ್ಧೆಗಳು ನಿಗದಿಯಾಗಿವೆ.