ಲಕ್ಷ್ಯ ಸೇನ್‌ಗೆ ಆಸ್ಟ್ರೇಲಿಯನ್ ಕಿರೀಟ: ಹಾಲಿ ವರ್ಷದ ಮೊದಲ ಪ್ರಶಸ್ತಿ

ಲಕ್ಷ್ಯ ಸೇನ್
ಲಕ್ಷ್ಯ ಸೇನ್
Published on

ಪ್ರಮುಖ ಮುಖ್ಯಾಂಶಗಳು

  • ಆಸ್ಟ್ರೇಲಿಯನ್ ಬ್ಯಾಡ್ಮಿಂಟನ್ ಟೂರ್ನಿ ಗೆದ್ದ 3ನೇ ಭಾರತೀಯ ಷಟ್ಲರ್
  • ವೃತ್ತಿಜೀವನದ ಮೂರನೇ ಸೂಪರ್-500 ಟ್ರೋಫಿ
  • ಹಾಲಿ ಋತುವಿನಲ್ಲಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ
ಸಿಡ್ನಿ: ಭಾರತದ ಯುವ ತಾರೆ ಲಕ್ಷ್ಯ ಸೇನ್ ಆಸ್ಟ್ರೇಲಿಯನ್ ಓಪನ್ ಸೂಪರ್ 500 ಬಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಹಾಲಿ ವರ್ಷದ ಮೊದಲ ಪ್ರಶಸ್ತಿ ಒಲಿಸಿಕೊಂಡರು. ಜತೆ ಸೂಪರ್-500 ಟೂರ್ನಿಯಲ್ಲಿ ಹಾಲಿ ವರ್ಷ ಭಾರತದ ಚೊಚ್ಚಲ ಪ್ರಶಸ್ತಿ ಸಾಧಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವೃತ್ತಿಜೀವನದ ಮೂರನೇ ಸೂಪರ್-500 ಟ್ರೋಫಿ ಜಯಿಸಿದ ಲಕ್ಷ್ಯಸೇನ್, ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಮೂರನೇ ಭಾರತೀಯ ಎನಿಸಿದರು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವ ನಂ.16 ಲಕ್ಷ್ಯಸೇನ್ 21-15, 21-11 ನೇರ ಗೇಮ್‌ಗಳಿಂದ ಜಪಾನ್‌ನ 26 ವರ್ಷದ ಯುಶಿ ಟನಕಾ ಎದುರು ಜಯ ಸಾಧಿಸಿದರು. ಪ್ಯಾರಿಸ್ ಒಲಿಂಪಿಕ್ಸ್ ನಂತರ ಗಾಯದ ಸಮಸ್ಯೆಯಿಂದ ಲಯ ತಪ್ಪಿದ್ದ ಲಕ್ಷ್ಯ ಸೇನ್ ಹಾಲಿ ಋತುವಿನ ಪ್ರಶಸ್ತಿ ಬರ ನೀಗಿಸಿಕೊಂಡರು. 38 ನಿಮಿಷಗಳಲ್ಲಿ ಮೇಲುಗೈ ಸಾಧಿಸಿದ ಲಕ್ಷ್ಯ ಸೇನ್, ಹಾಲಿ ಋತುವಿನಲ್ಲಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಎನಿಸಿದರು.
"

‘ಈ ಋತುವಿನ ಆರಂಭದಲ್ಲಿ ಗಾಯಗಳಿಂದ ಬಹಳಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಆದರೆ ಋತುವಿನ ಉದ್ದಕ್ಕೂ ನನ್ನ ಕಠಿಣ ಪರಿಶ್ರಮವನ್ನು ಮುಂದುವರಿಸಿದೆ. ಋತುವನ್ನು ಉತ್ತಮ ರೀತಿಯಲ್ಲಿ ಕೊನೆಗೊಳಿಸಲು ನನಗೆ ತುಂಬ ಸಂತೋಷವಾಗಿದೆ. ಮುಂದಿನ ಋತುವಿಗಾಗಿ ಎದುರು ನೋಡುತ್ತಿದ್ದೇನೆ’

3. ಲಕ್ಷ್ಯಸೇನ್ ಆಸ್ಟ್ರೇಲಿಯನ್ ಬ್ಯಾಡ್ಮಿಂಟನ್ ಟೂರ್ನಿ ಗೆದ್ದ 3ನೇ ಭಾರತೀಯ ಷಟ್ಲರ್. ಸೈನಾ ನೆಹ್ವಾಲ್ (2014, 2016), ಕಿಡಂಬಿ ಶ್ರೀಕಾಂತ್ (2017) ಹಿಂದಿನ ಸಾಧಕರು.
500: ಲಕ್ಷ್ಯಸೇನ್‌ಗೆ ಮೂರನೇ ಸೂಪರ್ 500 ಪ್ರಶಸ್ತಿ ಇದಾಗಿದ್ದು, ಈ ಮುನ್ನ ಇಂಡಿಯನ್ ಓಪನ್ (2021) ಕೆನಡಾ ಓಪನ್ (2023) ಪ್ರಶಸ್ತಿ ಜಯಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net