ಕರ್ನಾಟಕದ ಸಾಯಿ ಪುಷ್ಕರ್​ಗೆ ಕಿರಿಯರ ಬ್ಯಾಡ್ಮಿಂಟನ್​ ಪ್ರಶಸ್ತಿ

ಕರ್ನಾಟಕದ ಸಾಯಿ ಪುಷ್ಕರ್​ಗೆ ಕಿರಿಯರ ಬ್ಯಾಡ್ಮಿಂಟನ್​ ಪ್ರಶಸ್ತಿ
ಕರ್ನಾಟಕದ ಸಾಯಿ ಪುಷ್ಕರ್​ಗೆ ಕಿರಿಯರ ಬ್ಯಾಡ್ಮಿಂಟನ್​ ಪ್ರಶಸ್ತಿ
Published on
ಬೆಂಗಳೂರು: ಕರ್ನಾಟಕದ ಸಾಯಿ ಪುಷ್ಕರ್​, ಒಡಿಶಾದ ಭುವನೇಶ್ವರದಲ್ಲಿ ಇತ್ತೀಚೆಗೆ ನಡೆದ 37ನೇ ಸಬ್​ ಜೂನಿಯರ್​ ರಾಷ್ಟ್ರೀಯ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​ನ 15 ವಯೋಮಿತಿ ಬಾಲಕರ ಸಿಂಗಲ್ಸ್​ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಬೆಂಗಳೂರಿನ ಸೆಲೆನೈಟ್​ ಸ್ಪೋರ್ಟ್ಸ್​ ಅಕಾಡೆಮಿಯ ಸಾಯಿ, ಫೈನಲ್​ನಲ್ಲಿ ಹರ್ಷಿತ್​ ಖತ್ರಿ ವಿರುದ್ಧ 21-17, 21-12 ಗೇಮ್​ಗಳಿಂದ ಗೆಲುವು ಸಾಧಿಸಿದರು. ಸಾಯಿ 2023ರಲ್ಲಿ 13 ವಯೋಮಿತಿಯ ವಿಭಾಗದಲ್ಲೂ ರಾಷ್ಟ್ರೀಯ ಚಾಂಪಿಯನ್​ ಆಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net