ಭುವನ ಸುಂದರಿ ಸ್ಪರ್ಧೆಗೆ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​ ತೀರ್ಪುಗಾರ್ತಿ

ಭುವನ ಸುಂದರಿ ಸ್ಪರ್ಧೆಗೆ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​ ತೀರ್ಪುಗಾರ್ತಿ
ಭುವನ ಸುಂದರಿ ಸ್ಪರ್ಧೆಗೆ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​ ತೀರ್ಪುಗಾರ್ತಿ
Published on
ನವದೆಹಲಿ: ಭಾರತದ ಬ್ಯಾಡ್ಮಿಂಟನ್ (Badminton)​ ತಾರೆ ಸೈನಾ ನೆಹ್ವಾಲ್​ (saina nehwal), ಥಾಯ್ಲೆಂಡ್​ನಲ್ಲಿ ನವೆಂಬರ್​ 21ರಂದು ನಡೆಯಲಿರುವ 74ನೇ ಆವೃತ್ತಿಯ ಭುವನ ಸುಂದರಿ (Miss Universe) ಸ್ಪರ್ಧೆಯ ತೀರ್ಪುಗಾರರ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.

ಸಂಘಟಕರು ಭಾನುವಾರ ಇನ್​ಸ್ಟಾಗ್ರಾಂನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ. ಕೂಟದಲ್ಲಿ ಭಾರತದ ಪರ ಮನಿಕಾ ವಿಶ್ವಕರ್ಮ ಸ್ಪರ್ಧಿಸಲಿದ್ದಾರೆ.

35 ವರ್ಷದ ಸೈನಾ 2012ರ ಲಂಡನ್​ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಜಯಿಸಿದ್ದರು. 2010 ಮತ್ತು 2018ರ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಸ್ವರ್ಣ ಗೆದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net