ಗಾಯಾಳು ಲಕ್ಷ್ಯ ಸೇನ್ ಬದಲಿಗೆ ಕಣಕ್ಕಿಳಿದ ಮಾಜಿ ವಿಶ್ವ ನಂ. 1 ಕೆ. ಶ್ರೀಕಾಂತ್ 2ನೇ ಪಂದ್ಯದಲ್ಲಿ ವಿಶ್ವ ನಂ. 10 ಅಲೆಕ್ಸ್ ಲೇನಿಯರ್ ವಿರುದ್ಧ 16-21, 18-21ರಿಂದ ಮುಗ್ಗರಿಸಿದರು. 3ನೇ ಸಿಂಗಲ್ಸ್ ಪಂದ್ಯದಲ್ಲಿ ಪ್ರಣಯ್ ವಿಶ್ವ ನಂ. 17 ಟೊಮಾ ಪೊಪೊವ್ ವಿರುದ್ಧ 19-21, 16-21ರಿಂದ ಶರಣಾದರು. ಇದರಿಂದಾಗಿ ಭಾರತ ಕೊನೇ 2 ಡಬಲ್ಸ್ ಪಂದ್ಯಗಳಿಗೆ ಮುನ್ನವೇ ಸೋಲೊಪ್ಪಿಕೊಂಡಿತು.