ನೋಯ್ಡಾದ ವಿಷ್ಣುವರ್ಧನ್ ಭಾಟಿ ಅವರು ಒಟ್ಟಾರೆ 2 ಅಂಡರ್ ಪಾರ್ ಸ್ಕೋರ್‌ನೊಂದಿಗೆ ದ್ವಿತೀಯ ಸ್ಥಾನ ಪಡೆದು ರನ್ನರ್-ಅಪ್ ಆದರು. ಮೊದಲ ಸುತ್ತಿನಲ್ಲಿ 6 ಅಂಡರ್ ಪಾರ್ ಸಾಧಿಸಿ ಅಗ್ರಸ್ಥಾನದಲ್ಲಿದ್ದ ಭಾಟಿ, ಅಂತಿಮ ಸುತ್ತಿನಲ್ಲಿ ತೀವ್ರ ಸೆಖೆಯ ನಡುವೆಯೂ ದ್ವಿತೀಯ ಸ್ಥಾನ ಕಾಯ್ದುಕೊಂಡರು. ಇನ್ನು ಬೆಂಗಳೂರಿನ ಅಂಕುಶ್ ಸಹಾ ಅವರು ಲೆವೆಲ್ ಪಾರ್ ಟೋಟಲ್‌ನೊಂದಿಗೆ ತೃತೀಯ ಸ್ಥಾನ ಮುಡಿಗೇರಿಸಿಕೊಂಡರು. ಮೊದಲ ಸುತ್ತಿನಲ್ಲಿ 10ನೇ ಸ್ಥಾನದಲ್ಲಿದ್ದ ಸಹಾ, ಎರಡನೇ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿ ಮೂರನೇ ಸ್ಥಾನಕ್ಕೆ ಜಿಗಿದರು. ಜೆಕ್ ಗಣರಾಜ್ಯದ ತೆರೇಸಾ ಟೂರ್ನಿಯಲ್ಲಿ ವಿಜೇತರಾದರು.