ಯುಎಸ್​ ಓಪನ್ ಬ್ಯಾಡ್ಮಿಂಟನ್: ಕಿಡಂಬಿ ಶ್ರೀಕಾಂತ್​ ರನ್ನರ್​ಅಪ್​

ಯುಎಸ್​ ಓಪನ್ ಬ್ಯಾಡ್ಮಿಂಟನ್: ಕಿಡಂಬಿ ಶ್ರೀಕಾಂತ್​ ರನ್ನರ್​ಅಪ್​
ಯುಎಸ್​ ಓಪನ್ ಬ್ಯಾಡ್ಮಿಂಟನ್: ಕಿಡಂಬಿ ಶ್ರೀಕಾಂತ್​ ರನ್ನರ್​ಅಪ್​
Published on
ಫುಲ್ಲೇರ್ಟನ್​: ಭಾರತದ ಅನುಭವಿ ಆಟಗಾರ ಕಿಡಂಬಿ ಶ್ರೀಕಾಂತ್​ (Kidambi Srikanth) ಯುಎಸ್​ ಓಪನ್​ ಸೂಪರ್​ 300 ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ (US Open Super 300 badminton) ರನ್ನರ್​ಅಪ್​ ಸ್ಥಾನಕ್ಕೆ ಸಮಾಧಾನ ಕಂಡಿದ್ದಾರೆ. ಭಾನುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್​ ವಿಭಾಗದ ಫೈನಲ್​ ಪಂದ್ಯದಲ್ಲಿ 33 ವರ್ಷದ ಶ್ರೀಕಾಂತ್​ ಚೀನಾ ತೈಪೆಯ ಸು ಲಿ-ಯಾಂಗ್​ ವಿರುದ್ಧ 3 ಗೇಮ್​ಗಳ ದಿಟ್ಟ ಹೋರಾಟದಲ್ಲಿ 15-21, 21-16, 9-21ರಿಂದ ಪರಾಭವಗೊಂಡರು.

2021ರ ವಿಶ್ವ ಚಾಂಪಿಯನ್​ಷಿಪ್​ ರಜತ ವಿಜೇತ ಶ್ರೀಕಾಂತ್​ ಮೊದಲ ಗೇಮ್​ ಸೋತ ಬಳಿಕ 2ನೇ ಗೇಮ್​ನಲ್ಲಿ ತಿರುಗೇಟು ನೀಡಿದರು. ಆದರೆ ತನಗಿಂತ 9 ವರ್ಷ ಕಿರಿಯ ಲಿ-ಯಾಂಗ್​ ಎದುರು ಅಂತಿಮ ಗೇಮ್​ನಲ್ಲಿ ನಿರಾಸೆ ಅನುಭವಿಸಿದರು. ಇದರಿಂದ ಶ್ರೀಕಾಂತ್​ ಅವರ ಪ್ರಶಸ್ತಿ ಬರ ಮುಂದುವರಿದಿದೆ.

2017ರಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದಿರುವ ಮಾಜಿ ವಿಶ್ವ ನಂ. 1 ಶ್ರೀಕಾಂತ್​ ಕಳೆದ ವರ್ಷ 2 ಟೂರ್ನಿಗಳಲ್ಲಿ (ಮಲೇಷ್ಯಾ ಮಾಸ್ಟರ್ಸ್​, ಸಯ್ಯದ್​ ಮೋದಿ) ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net