

ನವದೆಹಲಿ: ಕರ್ನಾಟಕದ ಯುವ ಷಟ್ಲರ್ ಆಯುಷ್ ಶೆಟ್ಟಿ (
Ayush Shetty
) ಪ್ರತಿಷ್ಠಿತ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ (
BWF World Championships
) ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ. 1 ಆಟಗಾರ ಚೀನಾದ ಶಿ ಯು ಕಿ ವಿರುದ್ಧ ಅಮೋ ಗೆಲುವು ದಾಖಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ 17 ವರ್ಷಗಳ ಬಳಿಕ ಭಾರತದಲ್ಲಿ ನಡೆಯುತ್ತಿರುವ ವಿಶ್ವ ಸಮರದಲ್ಲಿ ಆತಿಥೇಯರಿಗೆ ಕನಸಿನ ಆರಂಭ ಒದಗಿಸಿದ್ದಾರೆ. ಅವಳಿ ಒಲಿಂಪಿಕ್ಸ್ ಪದಕ ಸಾಧಕಿ ಪಿವಿ ಸಿಂಧು ನಿರೀೆಯಂತೆಯೇ ಮೊದಲ ಸುತ್ತಿನಲ್ಲಿ ಸುಲಭ ಗೆಲುವು ದಾಖಲಿಸಿ ಶುಭಾರಂಭ ಕಂಡರು. ಟೂರ್ನಿಯ ಮೊದಲ ದಿನ ಆಡಿದ ಎಲ್ಲ ಭಾರತೀಯರೂ ಗೆಲುವು ಸಾಧಿಸಿದ್ದು ವಿಶೇಷವೆನಿಸಿತು.
ಆಯುಷ್ಗೆ 2ನೇ ಸುತ್ತಿನಲ್ಲಿ ಶ್ರೀಲಂಕಾದ ದುಮಿಂದು ಅಬೆಯ್ವಿಕ್ರಮ ಸವಾಲು ಎದುರಾಗಲಿದೆ.
ಪಿವಿ ಸಿಂಧುಗೆ ಸುಲಭ ಜಯ
ತ್ರಿಸಾ-ಗಾಯತ್ರಿ ಗೆಲುವಿನ ಆರಂಭ