ವಿನೂತನ ಮಾದರಿಯ ಪಂದ್ಯಾವಳಿ: 9 ಡ್ರೀಮ್ಸ್ ಸಂಸ್ಥೆ ಆಯೋಜಿಸಿದ್ದ ಸಿಎಂ ಕಪ್ 2026 ಟೂರ್ನಿ ರಾಜ್ಯದ ಕ್ರೀಡಾ ಕ್ಷೇತ್ರದಲ್ಲಿ ವಿಭಿನ್ನ ಮಾದರಿಯದ್ದಾಗಿತ್ತು. ಜನಪ್ರತಿನಿಧಿಗಳು, ಐಎಎಸ್/ಐಪಿಎಸ್, ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ವೈದ್ಯರು, ಚಲನಚಿತ್ರ ರಂಗ ಹಾಗೂ ಮಾಧ್ಯಮ ಕ್ಷೇತ್ರದವರು ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಸಚಿವರಾದ ಡಾ. ಎಂ.ಸಿ. ಸುಧಾಕರ್, ಮಾಜಿ ಎಂಎಲ್ಸಿ ನಾರಾಯಣಸ್ವಾಮಿ, ಐಎಎಸ್ ಅಧಿಕಾರಿ ಸೆಲ್ವಕುಮಾರ್, ಐಪಿಎಸ್ ಅಧಿಕಾರಿಗಳಾದ ಮಿಥುನ್, ರಮೇಶ್ ಬಾನೋಥ್, ಕೆಪಿಎಸ್ ಅಧಿಕಾರಿಗಳಾದ ಸತೀಶ್, ಯೋಗೀಶ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪರಮೇಶ್ವರ್ ಸೇರಿದಂತೆ ಹಲವರು ಸ್ಪರ್ಧಿಗಳಾಗಿ ಕಣಕ್ಕಿಳಿದಿದ್ದರು.