ವಿಶ್ವ ಜೂನಿಯರ್​ ಸ್ಕ್ವಾಷ್: ಫೈನಲ್​ಗೇರಿ ಇತಿಹಾಸ ಬರೆದ ಅನಾಹತ್​ ಸಿಂಗ್​

ವಿಶ್ವ ಜೂನಿಯರ್​ ಸ್ಕ್ವಾಷ್: ಫೈನಲ್​ಗೇರಿ ಇತಿಹಾಸ ಬರೆದ ಅನಾಹತ್​ ಸಿಂಗ್​
ವಿಶ್ವ ಜೂನಿಯರ್​ ಸ್ಕ್ವಾಷ್: ಫೈನಲ್​ಗೇರಿ ಇತಿಹಾಸ ಬರೆದ ಅನಾಹತ್​ ಸಿಂಗ್​
Published on
ಒಂಟಾರಿಯೊ: ಯುವ ಆಟಗಾರ್ತಿ ಅನಾಹತ್​ ಸಿಂಗ್ (Anahat Singh)​ ವಿಶ್ವ ಜೂನಿಯರ್​ ಸ್ಕ್ವಾಷ್ (Squash) ಚಾಂಪಿಯನ್​ಷಿಪ್​ನಲ್ಲಿ ಕಳೆದ 21 ವರ್ಷಗಳಲ್ಲಿ ಫೈನಲ್​ಗೇರಿದ ಮೊದಲ ಭಾರತೀಯರೆನಿಸಿದ್ದಾರೆ. 2005ರಲ್ಲಿ ಕೊನೆಯದಾಗಿ ಜೋಶ್ನಾ ಚಿನ್ನಪ್ಪ ಈ ಸಾಧನೆ ಮಾಡಿದ್ದರು.

ಶುಕ್ರವಾರ ನಡೆದ ಸೆಮಿಫೈನಲ್​ನಲ್ಲಿ ದೆಹಲಿಯ ಅನಾಹತ್​ 11-3, 8-11, 11-4, 11-6ರಿಂದ ಈಜಿಪ್ಟ್​ನ ರ್ಬಬ್​ ಸಮೆಹ್​ ವಿರುದ್ಧ ಗೆಲುವು ಸಾಧಿಸಿದರು. ವಿಶ್ವ ನಂ. 20 ಅನಾಹತ್​, ವಿಶ್ವ ಜೂನಿಯರ್​ ಸ್ಕ್ವಾಷ್ ಚಾಂಪಿಯನ್​ ಪಟ್ಟವೇರಿದ ಮೊದಲ ಭಾರತೀಯರೆನಿಸುವ ಸಾಧನೆಯಿಂದ ಕೇವಲ 1 ಗೆಲುವು ದೂರದಲ್ಲಿದ್ದಾರೆ.

18 ವರ್ಷದ ಅನಾಹತ್ ಫೈನಲ್​ನಲ್ಲಿ 2ನೇ ಶ್ರೇಯಾಂಕಿತೆ ಈಜಿಪ್ಟ್​ನ ರುಖಯ್ಯ ಸಲೆಮ್​ ವಿರುದ್ಧ ಸೆಣಸಲಿದ್ದಾರೆ. ಅನಾಹತ್​ ಹಿಂದಿನ 4 ವಿಶ್ವ ಜೂ. ಸ್ಕ್ವಾಷ್​ ಟೂರ್ನಿಗಳಲ್ಲಿ ಸೆಮೀಸ್​ ದಾಟಲು ವಿಲರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net