ಬೆಂಗಳೂರು ಟೆಸ್ಟ್​ ಗೆಲುವಿನ ನಡುವೆ ನ್ಯೂಜಿಲೆಂಡ್​ಗೆ ಬ್ಯಾಡ್​ ನ್ಯೂಸ್​! ಕೇನ್​ ಪುಣೆ ಟೆಸ್ಟ್​ಗೂ ಅಲಭ್ಯ...

web kane
Published on

ಪುಣೆ: ಅನುಭವಿ ಬ್ಯಾಟರ್​ ಕೇನ್​ ವಿಲಿಯಮ್ಸನ್​ ಭಾರತ ವಿರುದ್ಧದ 2ನೇ ಟೆಸ್ಟ್​ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಅವರು ಗಾಯದಿಂದಾಗಿ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯವನ್ನೂ ತಪ್ಪಿಸಿಕೊಂಡಿದ್ದರು. ಕಳೆದ ಶ್ರೀಲಂಕಾ ಪ್ರವಾಸದಲ್ಲಿ ಗಾಯಗೊಂಡಿದ್ದ ವಿಲಿಯಮ್ಸನ್​ ಇನ್ನು ನವೆಂಬರ್​ 1ರಿಂದ ಮುಂಬೈನಲ್ಲಿ ನಡೆಯಲಿರುವ ಕೊನೇ ಟೆಸ್ಟ್​ಗೆ ಫಿಟ್​ ಆಗುವ ನಿರೀಕ್ಷೆ ಇದೆ.

ಕೇನ್​ ಗೈರಿನಲ್ಲಿ ಬೆಂಗಳೂರಿನಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ್ದ ವಿಲ್​ ಯಂಗ್​ (33, 48*) ಉತ್ತಮ ನಿರ್ವಹಣೆಯನ್ನೇ ತೋರಿದ್ದರು. ಹೀಗಾಗಿ ಶೇ. 100 ಫಿಟ್​ ಆಗುವವರೆಗೆ ಕೇನ್​ ಮರಳಿ ಕಣಕ್ಕಿಳಿಯುವುದಿಲ್ಲ ಎಂದು ಕಿವೀಸ್​ ಕೋಚ್​ ಗ್ಯಾರಿ ಸ್ಟೆಡ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net