ಟಿ20 ರನ್​ ಗಳಿಕೆಯಲ್ಲಿ ರೋಹಿತ್ ಶರ್ಮ​ ಹಿಂದಿಕ್ಕಿದ ಬಾಬರ್ ಅಜಮ್​​

web ro bab
Published on

ಕರಾಚಿ: ಪಾಕಿಸ್ತಾನದ ಮಾಜಿ ನಾಯಕ ಹಾಗೂ ಅನುಭವಿ ಬ್ಯಾಟರ್​ ಬಾಬರ್​ ಅಜಮ್​ (4,234) ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ ರನ್​ ಗಳಿಕೆಯಲ್ಲಿ ಭಾರತದ ರೋಹಿತ್​ ಶರ್ಮ (4,231) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ದ. ಆಫ್ರಿಕಾ ವಿರುದ್ಧ ಶುಕ್ರವಾರ ರಾತ್ರಿ ನಡೆದ 2ನೇ ಟಿ20 ಪಂದ್ಯದಲ್ಲಿ ಅಜೇಯ 11 ರನ್​ ಗಳಿಸುವ ಅವರು ಈ ಸಾಧನೆ ಮಾಡಿದರು. 2024ರ ಡಿಸೆಂಬರ್​ ಬಳಿಕ ಪಾಕ್​ ಟಿ20 ತಂಡಕ್ಕೆ ಮರಳಿರುವ ಅವರು ಸರಣಿಯ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net