ಆಫ್ರಿಕಾ ಎದುರು ಟಿ20 ಸರಣಿ ಗೆದ್ದ ಆಸೀಸ್: ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ

New Project (16)
Published on

ಡರ್ಬನ್: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಪ್ರವಾಸಿ ಆಸ್ಟ್ರೇಲಿಯಾ ತಂಡ 2ನೇ ಟಿ20ಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು 8 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದ.ಆಫ್ರಿಕಾ ಸೀನ್ ಅಬೋಟ್ (22ಕ್ಕೆ3) ಮತ್ತು ನಥಾನ್ ಎಲ್ಲಿಸ್ (25ಕ್ಕೆ 3) ಬಿಗಿ ಬೌಲಿಂಗ್ ದಾಳಿ ಎದುರು 8 ವಿಕೆಟ್‌ಗೆ 164 ರನ್ ಕಲೆಹಾಕಿತು. ಆರಂಭಿಕ ಮ್ಯಾಥ್ಯೂ ಶಾರ್ಟ್ (66) ಹಾಗೂ ನಾಯಕ ಮಿಚೆಲ್ ಮಾರ್ಷ್ (79*) ಜತೆಯಾಟದ ನೆರವಿನಿಂದ ಆಸೀಸ್ 14.5 ಓವರ್‌ಗಳಲ್ಲಿ 2 ವಿಕೆಟ್‌ಗೆ 168 ರನ್ ಪೇರಿಸಿ ಸರಣಿ ಗೆದ್ದಿತು.

ಮೂರನೇ ಹಾಗೂ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ.

ದ.ಆಫ್ರಿಕಾ: 8 ವಿಕೆಟ್‌ಗೆ 164 (ಟೆಂಬಾ ಬವುಮಾ 35, ಏಡೆನ್ ಮಾರ್ಕ್ರಮ್ 49,ಟ್ರಿಸ್ಟನ್ ಸ್ಟಬ್ಸ್ 27, ಗೆರಾಲ್ಡ್ 11, ಎನ್‌ಗಿಡಿ 13*, ಸೀನ್ ಅಬೋಟ್ 22ಕ್ಕೆ3, ನಥಾನ್ ಎಲ್ಲಿಸ್ 25ಕ್ಕೆ 3).

ಆಸ್ಟ್ರೇಲಿಯಾ: 14.5 ಓವರ್‌ಗಳಲ್ಲಿ 2 ವಿಕೆಟ್‌ಗೆ 168 (ಮ್ಯಾಥ್ಯೂ ಶಾರ್ಟ್ 66, ಟ್ರಾವಿಸ್ ಹೆಡ್ 18, ಮಿಚೆಲ್ ಮಾರ್ಷ್ 79*, ಇಂಗ್ಲೀಸ್ 2*, ಲಿಜಾಡ್ ವಿಲಿಯಮ್ಸ್ 17ಕ್ಕೆ1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net