ಮಾಜಿ ಪ್ರೇಯಸಿ ಜತೆ ಸಿಕ್ಕಿಬಿದ್ದ ಮೈಕೆಲ್​ ಕ್ಲಾರ್ಕ್​ಗೆ ಕಪಾಳಮೋಕ್ಷ ಮಾಡಿದ ಹಾಲಿ ಪ್ರೇಯಸಿ! ವಿಡಿಯೋ ವೈರಲ್​

Clark
Published on

ಸಿಡ್ನಿ: ಪ್ರೇಯಸಿಯಿಂದ ಪಬ್ಲಿಕ್​ ಪಾರ್ಕ್​ನಲ್ಲಿ ಕಪಾಳಮೋಕ್ಷ ಮಾಡಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ತೀವ್ರ ಮುಜುಗರಕ್ಕೀಡಾಗಿರುವ ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕೆಲ್​ ಕ್ಲಾರ್ಕ್​, ಸದ್ಯ ಡ್ಯಾಮೇಜ್​ ಕಂಟ್ರೋಲ್​ನಲ್ಲಿ ಮುಳುಗಿದ್ದಾರೆ.

ಮೇಲಿನ ಅಂಗಿ ಇಲ್ಲದೆ, ಕೇವಲ ಶಾರ್ಟ್ಸ್​ನಲ್ಲಿರುವ ಕ್ಲಾರ್ಕ್​, ಕೂಗುತ್ತಾ ಬರುತ್ತಿರುವುದು ಮತ್ತು ಅವರ ಪ್ರೇಯಸಿ ಜೇಡ್ ಯಾರ್ಬ್ರೋ ಅವರು ಕ್ಲಾರ್ಕ್​ ಕೆನ್ನೆಗೆ ಬಾರಿಸಿರುವ ದೃಶ್ಯ ವಿಡಿಯೋದಲ್ಲಿದೆ. ಮೂಲಗಳ ಪ್ರಕಾರ ಮಾಜಿ ಪ್ರೇಯಸಿ ಪಿಪ್​ ಎಡ್ವರ್ಡ್​ ಜೊತೆ ಕ್ಲಾರ್ಕ್​ ಸಿಕ್ಕಿಬಿದ್ದಿದ್ದೇ ಹಾಲಿ ಪ್ರೇಯಸಿಯ ಕಪಾಳಮೋಕ್ಷಕ್ಕೆ ಕಾರಣ ಎಂದು ತಿಳಿದುಬಂದಿದೆ.

ನಾನು ಎಲ್ಲವನ್ನು ನೋಡಿದ್ದೇನೆ. ನಾನು ಏನು ತಪ್ಪು ಮಾಡಿದೆ? ಎಂದು ಪ್ರಶ್ನಿಸುವ ಮೂಲಕ ಜೇಡ್​ ಅವರು ಕ್ಲಾರ್ಕ್​ ಅವರನ್ನು ನಿಂದಿಸುತ್ತಿರುವುದು ವಿಡಿಯೋದಲ್ಲಿದೆ. ಆದಾಗ್ಯೂ ಕ್ಲಾರ್ಕ್​, ಜೇಡ್​ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಾರೆ. ಬೇಬಿ ನಿನ್ನದು ತಪ್ಪು ಎಂದು ಹೇಳುತ್ತಾರೆ.

ಅಂದಹಾಗೆ ಈ ಘಟನೆ ಜನವರಿ 10ರಂದು ನಡೆದಿದೆ. ಕೆಲವು ದಿನಗಳ ಹಿಂದೆ ವಿಡಿಯೋ ಸೋರಿಕೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ಬಳಿಕ ಕ್ಲಾರ್ಕ್​ ಆಗಲಿ ಅಥವಾ ಜೇಡ್​ ಆಗಲಿ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ವಿಡಿಯೋ ವೈರಲ್​ ಆದ ಮೇಲೆ ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಲ್ಲ. ಕ್ಲಾರ್ಕ್​ ಅವರ ಮಾಜಿ ಪ್ರೇಯಸಿ ಎಡ್ವರ್ಡ್​ ವಿವಾದದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಅಂದಹಾಗೆ ಕ್ಲಾರ್ಕ್​ ಅವರು ಮಾಜಿ ಮಾಡೆಲ್​ ಹಾಗೂ ಪತ್ನಿ ಕೈಲೈ ಅವರಿಂದ ದೂರವಾದ ಬಳಿಕ ಎಡ್ವರ್ಡ್ ಜೊತೆ ಸಂಬಂಧದಲ್ಲಿದ್ದರು. ಇಬ್ಬರಿಂದ ದೂರಾದ ಬಳಿಕ ಜೇಡ್​ ಅವರೊಂದಿಗೆ ಕ್ಲಾರ್ಕ್​ ಸಂಬಂಧದಲ್ಲಿದ್ದರು. ಇದೀಗ ಜೇಡ್​ಗೆ ಗೊತ್ತಿಲ್ಲದಂತೆ ಮಾಜಿ ಪ್ರೇಯಸಿ ಎಡ್ವರ್ಡ್​ ಜೊತೆ ಇದ್ದಾಗ ಕ್ಲಾರ್ಕ್​ ಸಿಕ್ಕಿಬಿದ್ದಿದ್ದು, ಹಾಲಿ ಪ್ರೇಯಸಿ ಜೇಡ್​ ಕೈಯಿಂದ ಕಪಾಳಕ್ಕೆ ಏಟು ತಿಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net