

ಮ್ಯಾಂಚೆಸ್ಟರ್: ಸ್ಪಿನ್ನರ್ ಆಡಂ ಜಂಪಾ (55ಕ್ಕೆ 4) ಹಾಗೂ ವೇಗಿ ಜೋಶ್ ಹ್ಯಾಸಲ್ವುಡ್ (26ಕ್ಕೆ 3) ಮಾರಕ ದಾಳಿ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡದ ಎದುರು 19 ರನ್ಗಳಿಂದ ಜಯ ದಾಖಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಯಿಂದ ಮುನ್ನಡೆ ಸಾಧಿಸಿತು. ಟಿ20 ಕ್ರಿಕೆಟ್ನಲ್ಲಿ ಸರಣಿಯಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಹಾಕಿತು.
ಇದನ್ನೂ ಓದಿ: ಸಂಕಷ್ಟದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್
ಆಸ್ಟ್ರೇಲಿಯಾ : 50 ಓವರ್ಗಳಲ್ಲಿ 9 ವಿಕೆಟ್ಗೆ 294 (ಸ್ಟೋಯಿನಿಸ್ 43, ಮಾರ್ಷ್ 73, ಮ್ಯಾಕ್ಸ್ವೆಲ್ 77, ಆರ್ಚರ್ 57ಕ್ಕೆ 3, ಮಾರ್ಕ್ ವುಡ್ 54ಕ್ಕೆ 3, ರಶೀದ್ 55ಕ್ಕೆ 2). ಇಂಗ್ಲೆಂಡ್: 50 ಓವರ್ಗಳಲ್ಲಿ 9 ವಿಕೆಟ್ಗೆ 275 (ಜಾನಿ ಬೇರ್ಸ್ಟೋ 84, ಬಿಲ್ಲಿಂಗ್ಸ್ 118, ಮಾರ್ಗನ್ 23, ಹ್ಯಾಜಲ್ವುಡ್ 26ಕ್ಕೆ 3, ಜಂಪಾ 55ಕ್ಕೆ 4, ಕಮ್ಮಿನ್ಸ್ 74ಕ್ಕೆ 1, ಮಾರ್ಷ್ 29ಕ್ಕೆ 1).