ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್ ಆಗಿದ್ದಕ್ಕೆ ಡೇವಿಡ್ ವಾರ್ನರ್ ಏನಂತಾರೆ?

warner1
Published on

ನವದೆಹಲಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಲಾಕ್‌ಡೌನ್ ಸಮಯದಲ್ಲಿ ಭಾರತೀಯ ಸಿನಿಮಾದ ಹಾಡುಗಳಿಗೆ ವಿವಿಧ ಟಿಕ್‌ಟಾಕ್ ವಿಡಿಯೋಗಳನ್ನು ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಆದರೆ ಈಗ ಚೀನಾದ 59 ಆ್ಯಪ್‌ಗಳ ಜತೆಗೆ ಟಿಕ್‌ಟಾಕ್ ಕೂಡ ನಿಷೇಧಿಸಲ್ಪಟ್ಟಿದೆ. ಈ ಬಗ್ಗೆ ವಾರ್ನರ್ ಏನು ಹೇಳುತ್ತಾರೆ ಗೊತ್ತೇ?

ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್ ಆಗಿರುವ ಬಗ್ಗೆ ವಾರ್ನರ್‌ಗೆ ಅಭಿಮಾನಿಯೊಬ್ಬರು ಸಂದೇಶ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವಾರ್ನರ್, ‘ಹೌದು ಗೊತ್ತಿದೆ. ಆದರೆ ಈ ಬಗ್ಗೆ ನಾನೇನೂ ಮಾಡಲು ಸಾಧ್ಯವಿಲ್ಲ. ಅದು ಸರ್ಕಾರದ ನಿರ್ಧಾರ. ಭಾರತದ ಜನರೆಲ್ಲರೂ ಅದನ್ನು ಗೌರವಿಸಬೇಕು’ ಎಂದು ಹೇಳಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿರುವ ತಾವು ಟಿಕ್‌ಟಾಕ್ ವಿಡಿಯೋಗಳನ್ನು ಮುಂದುವರಿಸುವುದನ್ನು ಸ್ಪಷ್ಟಪಡಿಸಿದ್ದಾರೆ.

ತೆಲುಗು, ತಮಿಳು ಮತ್ತು ಹಿಂದಿ ಹಾಡುಗಳಿಗೆ ಪತ್ನಿ ಮತ್ತು ಮಕ್ಕಳ ಜತೆ ನರ್ತಿಸಿ ಟಿಕ್‌ಟಾಕ್ ವಿಡಿಯೋಗಳನ್ನು ಮಾಡುವ ಮೂಲಕ 33 ವರ್ಷದ ವಾರ್ನರ್ ಇತ್ತೀಚೆಗೆ ಭಾರತೀಯ ಕ್ರಿಕೆಟ್ ಪ್ರೇಮಿಗಳ ಗಮನಸೆಳೆಯುತ್ತ ಬಂದಿದ್ದರು. ಟಿಕ್‌ಟಾಕ್ ಬ್ಯಾನ್ ಆದ ಬೆನ್ನಲ್ಲೇ ಭಾರತದ ಸ್ಪಿನ್ನರ್ ಆರ್. ಅಶ್ವಿನ್, ‘ವಾರ್ನರ್ ಹೀಗೇನು ಮಾಡುವರು?’ ಎಂಬ ಕಮೆಂಟ್‌ನೊಂದಿಗೆ ಕಾಲೆಳೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net