

ಮೆಲ್ಬೋರ್ನ್: ಆರಂಭಿಕ ಆಘಾತದ ನಡುವೆ ಮಿಚೆಲ್ ಮಾರ್ಷ್ (96 ರನ್, 130 ಎಸೆತ, 13 ಬೌಂಡರಿ) ನಡೆಸಿದ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ತಂಡ 2ನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಪ್ರವಾಸಿ ಪಾಕಿಸ್ತಾನ ತಂಡಕ್ಕೆ ತಿರುಗೇಟು ನೀಡುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿದೆ. ಎಂಸಿಜಿಯಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಗುರುವಾರ 6 ವಿಕೆಟ್‌ಗೆ 196 ರನ್‌ಗಳಿಂದ ದಿನದಾಟ ಆರಂಭಿಸಿದ ಪಾಕಿಸ್ತಾನ ಭೋಜನಾ ವಿರಾಮಕ್ಕೂ ಮುನ್ನವೇ 264 ರನ್‌ಗಳಿಗೆ ಸರ್ವಪತನ ಕಂಡಿತು. 54 ರನ್ ಮುನ್ನಡೆಯೊಂದಿಗೆ 2ನೇ ಸರದಿ ಆರಂಭಿಸಿ ಆಸೀಸ್, ಮಿಚೆಲ್ ಮಾರ್ಷ್- ಸ್ಟೀವನ್ ಸ್ಮಿತ್ (50) ಜತೆಯಾಟದಿಂದ ಚೇತರಿಸಿಕೊಂಡು ದಿನದಂತ್ಯಕ್ಕೆ 6 ವಿಕೆಟ್‌ಗೆ 187 ರನ್‌ಗಳಿಸಿದ್ದು, ಸದ್ಯ ಒಟ್ಟಾರೆ 241 ರನ್ ಮುನ್ನಡೆ ಸಾಧಿಸಿದೆ. ಒಂದು ಹಂತದಲ್ಲಿ ಆಸೀಸ್ 16 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು.
ಆಸ್ಟ್ರೇಲಿಯಾ: 318 ಹಾಗೂ 6 ವಿಕೆಟ್‌ಗೆ 187 (ವಾರ್ನರ್ 6, ಲಬುಶೇನ್ 4, ಸ್ಮಿತ್ 50, ಮಾರ್ಷ್ 96, ಕ್ಯಾರಿ 16*, ಶಹೀನ್ ಷಾ ಅಫ್ರಿದಿ 58ಕ್ಕೆ 3, ಹಮ್‌ಜಾ 27ಕ್ಕೆ 3). ಪಾಕಿಸ್ತಾನ: 73.5 ಓವರ್‌ಗಳಲ್ಲಿ 264 (ರಿಜ್ವಾನ್ 42, ಜಮಾಲ್ 33, ಅಫ್ರಿದಿ 21, ಕಮ್ಮಿನ್ಸ್ 48ಕ್ಕೆ 5, ಲ್ಯಾನ್ 73ಕ್ಕೆ 4).
ಲಿಫ್ಟಿಟ್ನಲ್ಲಿ ಸಿಲುಕಿದ ಅಂಪೈರ್, ಆಟ ವಿಳಂಬ!
ಮಳೆಯಿಂದಾಗಿ ವಿಳಂಬಗೊಂಡ ಭೋಜನಾ ವಿರಾಮದ ನಂತರದ ಆಟಕ್ಕೆ ಮೂರನೇ ಅಂಪೈರ್
ಲಿಫ್ಟ್‌ನಲ್ಲಿ ಸಿಲುಕಿದ ಕಾರಣವೂ ಸೇರಿತು. ಊಟ ಮುಗಿಸಿ ವಾಪಸ್ ಆಗುವಾಗ ಇಂಗ್ಲೆಂಡ್‌ನ ರಿಚರ್ಡ್ ಇಲ್ಲಿಂಗ್‌ವರ್ತ್ ಲ್‌ಟಿನಲ್ಲಿ ಸಿಲುಕಿಕೊಂಡಿದ್ದರಿಂದ ನಿಗದಿತ ಸಮಯಕ್ಕೆ ತನ್ನ ಸ್ಥಾನಕ್ಕೆ ಮರಳಲು ವಿಲರಾದರು. ಇದನ್ನು ಫೀಲ್ಡ್ ಅಂಪೈರ್‌ಗಳಿಗೆ ತಿಳಿಸಿ ಕೆಲ ನಿಮಿಷ ಆಟ ನಿಲ್ಲಿಸಲಾಗಿತ್ತು. ಇದನ್ನು ಗಮನಿಸಿದ ಮೀಸಲು ಅಂಪೈರ್ ಫಿಲಿಪ್ಸ್ ಗಿಲ್ಲೆಸ್ಪಿ, ಅವರ ಸ್ಥಾನ ತುಂಬಲು ತೆರಳಿದರು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.