ವಾಂಖೆಡೆಯಲ್ಲಿ ಆಸೀಸ್-ಆಫ್ಘನ್ ಮುಖಾಮುಖಿ: ಸೆಮೀಸ್ ಪ್ರವೇಶಿಸುವ ತವಕದಲ್ಲಿ ಆಸ್ಟ್ರೇಲಿಯಾ

New-Project
Published on

ಮುಂಬೈ: ಸತತ ಐದು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಭರ್ಜರಿ ಲಯದಲ್ಲಿರುವ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಂಗಳವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಅ್ಘಾನಿಸ್ತಾನ ತಂಡದ ಸವಾಲು ಎದುರಿಸಲಿದೆ. ಪ್ಯಾಟ್ ಕಮ್ಮಿನ್ಸ್ ಪಡೆ ಗೆಲುವಿನ ಓಟ ಕಾಯ್ದುಕೊಳ್ಳುವ ಜತೆಗೆ ಮೂರನೇ ತಂಡವಾಗಿ ಸೆಮಿೈನಲ್ ಸ್ಥಾನ ಖಚಿತಪಡಿಸುವ ತವಕದಲ್ಲಿದೆ.
ಆರಂಭಿಕ 2 ಪಂದ್ಯಗಳ ಸೋಲಿನ ಬಳಿಕ ಜಯದ ಹಳಿಗೆ ಮರಳಿರುವ ಆಸ್ಟ್ರೇಲಿಯಾ ಆಡಿರುವ 7 ಪಂದ್ಯಗಳಲ್ಲಿ 10 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇನ್ನೊಂದು ಜಯದೊಂದಿಗೆ ಅಧಿಕೃತವಾಗಿ ಉಪಾಂತ್ಯಕ್ಕೆ ಲಗ್ಗೆಯಿಡಲಿದೆ. ಇತ್ತ ಅ್ಘಾನಿಸ್ತಾನ ತಂಡ ಇಷ್ಟೇ ಪಂದ್ಯಗಳನ್ನಾಡಿ 4ರಲ್ಲಿ ಗೆಲುವು ದಾಖಲಿಸಿ 8 ಅಂಕದೊಂದಿಗೆ ಆರನೇ ಸ್ಥಾನದಲ್ಲಿದೆ. ಮಿಚೆಲ್ ಮಾರ್ಷ್ ಆಗಮನ ಆಸೀಸ್ ತಂಡದ ಬಲ ಹೆಚ್ಚಿಸಿದೆ. ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್ ಭರ್ಜರಿ ಾರ್ಮ್‌ನಲಿದ್ದು, ಬ್ಯಾಟಿಂಗ್ ಸ್ನೇಹಿ ವಾಂಖೆಡೆಯಲ್ಲಿ ರನ್ ಹೊಳೆ ಹರಿಸುವ ನಿರೀಕ್ಷೆಯಲ್ಲಿದೆ. ಆದರೆ ಮಧ್ಯಮ ಸರದಿಯ ಬ್ಯಾಟರ್‌ಗಳು ಟೂರ್ನಿಯಲ್ಲಿ ಇದುವರೆಗೂ ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಸ್ಟೀವನ್ ಸ್ಮಿತ್ ಅಸ್ಥಿರ ಪ್ರದರ್ಶನ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಬೌಲಿಂಗ್‌ನಲ್ಲಿ ಸ್ಪಿನ್ನರ್ ಆಡಂ ಜಂಪಾ 19 ವಿಕೆಟ್ ಉರುಳಿಸಿ ಟೂರ್ನಿಯ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಬ್ಯಾಟರ್‌ಗಳ ಜತೆಗೆ ಬೌಲರ್‌ಗಳಿಗೂ ನೆರವು ಒದಗಿಸುವ ಅಂಗಣದಲ್ಲಿ ಕಾಂಗರೂ ಪಡೆಯ ಬೌಲಿಂಗ್ ವಿಭಾಗ ಆ್ಘನ್‌ಗೆ ಸವಾಲೊಡ್ಡಲಿದೆ. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಜತೆಗೆ ಜೋಶ್ ಹ್ಯಾಸಲ್ ವುಡ್ ಸಾಥ್ ನೀಡಿದ್ದಾರೆ.
ಕಳೆದ ಐದು ಪಂದ್ಯಗಳಲ್ಲಿ 4ರಲ್ಲಿ ಜಯಿಸಿ ಸೆಮಿೈನಲ್ ಆಸೆ ಜೀವಂತವಿರಿಸಿರುವ ಅ್ಘಾನಿಸ್ತಾನಕ್ಕೆ ಸ್ಪಿನ್ನರ್‌ಗಳೇ ಪ್ರಮುಖ ಶಕ್ತಿ. ರಹಮಾನುಲ್ಲಾ ಗುರ್ಬಜ್ ಹೊರತುಪಡಿಸಿ ಅಗ್ರ ಕ್ರಮಾಂಕ ಬ್ಯಾಟರ್‌ಗಳು ಬ್ಯಾಟಿಂಗ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ಮೂಲಕ ಗಮಸ ಸೆಳೆದಿದ್ದಾರೆ. ಆದರೆ ಆಸ್ಟ್ರೇಲಿಯಾ ಬೌಲರ್‌ಗಳ ಎದುರು ಬ್ಯಾಟರ್‌ಗಳಿಗೆ ಸತ್ವ ಪರೀಕ್ಷೆ ಎದುರಾಗಲಿದೆ. ಅಚ್ಚರಿಯ ತಂಡವಾಗಿ ಸೆಮೀಸ್‌ಗೇರುವ ಜೀವಂತವಾಗಿಟ್ಟಿರುವ ಆ್ಘನ್ ಎರಡು ಪಂದ್ಯಗಳ ಗೆಲುವಿನ ಜತೆಗೆ ರನ್‌ರೇಟ್ ಸುಧಾರಣೆಗೆ ಒತ್ತು ನೀಡಬೇಕಿದೆ.

ವಿಶ್ವಕಪ್ ಮುಖಾಮುಖಿ-2
ಆಸ್ಟ್ರೇಲಿಯಾ-2
ಆ್ಘನ್-0

ಏಕದಿನ ಮುಖಾಮುಖಿ- 3
ಆಸ್ಟ್ರೇಲಿಯಾ-3
ಆ್ಘನ್-0
ಆರಂಭ: ಮಧ್ಯಾಹ್ನ 2
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net