ಒಂದೇ ಒಲಿಂಪಿಕ್ಸ್‌ನಲ್ಲಿ 7 ಪದಕ.. ದಾಖಲೆ ಸೃಷ್ಟಿಸಿದ ಆಸ್ಟ್ರೇಲಿಯಾ ಈಜುಗಾರ್ತಿ

pic emma
Published on

ಟೋಕಿಯೋ: ಆಸ್ಟ್ರೇಲಿಯಾದ 27 ವರ್ಷದ ಮಹಿಳಾ ಈಜುಗಾರ್ತಿ ಎಮ್ಮಾ ಮೆಕೋಯ್ನ್ ಒಂದೇ ಒಲಿಂಪಿಕ್ಸ್‌ನಲ್ಲಿ ಏಳು ಪದಕಗಳನ್ನು ಗೆದ್ದ ಮೊದಲ ಮಹಿಳಾ ಈಜುಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಮಹಿಳೆಯರ 100 ಮೀ. ಫ್ರೀಸ್ಟೈಲ್, 4x100 ಮೀ. ಫ್ರೀಸ್ಟೈಲ್ ರಿಲೇ, 4x100 ಮೀ. ಮೆಡ್ಲೆ ರಿಲೇ ಮತ್ತು 50 ಮೀ. ಫ್ರೀಸ್ಟೈಲ್ ನಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ ಮಹಿಳೆಯರ 100 ಮೀಟರ್ ಬಟರ್ ಫ್ಲೈ ವಿಭಾಗ, 4x200 ಮೀ. ಫ್ರೀಸ್ಟೈಲ್ ರಿಲೇ ಮತ್ತು ಮಿಶ್ರ 4x100 ಮೀ. ಮೆಡ್ಲೆ ರಿಲೇಯಲ್ಲಿ ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ದಾಖಲೆಗೆ ಪಾತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net