

ಗ್ರಾಸ್ ಐಲೆಟ್: ಎಡಗೈ ಆರಂಭಿಕ ಟ್ರಾವಿಸ್ ಹೆಡ್ (68 ರನ್, 49 ಎಸೆತ, 5 ಬೌಂಡರಿ, 4 ಸಿಕ್ಸರ್) ಹಾಗೂ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ (59 ರನ್, 29 ಎಸೆತ, 9 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ಎದುರು 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಸತತ 4ನೇ ಜಯದೊಂದಿಗೆ ಮಿಚೆಲ್ ಮಾರ್ಷ್ ಪಡೆ ಬಿ ಗುಂಪಿನ ಅಗ್ರಸ್ಥಾನ ಕಾಯ್ದುಕೊಂಡರೆ, 2ನೇ ಸ್ಥಾನಿಯಾಗಿ ಇಂಗ್ಲೆಂಡ್ ಸೂಪರ್-8ಗೆ ಲಗ್ಗೆಯಿಟ್ಟಿತು. ಸ್ಕಾಟ್ಲೆಂಡ್‌ಗೆ ಈ ಪಂದ್ಯ ಗೆದ್ದರಷ್ಟೇ ಸೂಪರ್-8 ಪ್ರವೇಶಿಸುವ ಅವಕಾಶವಿತ್ತು.
ಡರೇನ್ ಸ್ಯಾಮ್ಮಿ ಕ್ರೀಡಾಂಗಣದಲ್ಲಿ ನಡೆದ ನಿರ್ಣಾಯಕ ಕಾದಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸ್ಕಾಟ್ಲೆಂಡ್, ಬ್ರಾಂಡನ್ ಮೆಕ್‌ಮೂಲೆನ್ (60 ರನ್, 34 ಎಸೆತ, 2 ಬೌಂಡರಿ, 6 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗೆ 180 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್‌ನ ಗರಿಷ್ಠ ಮೊತ್ತವಾಗಿದೆ. ಪ್ರತಿಯಾಗಿ ನಿಧಾನಗತಿಯ ಆರಂಭ ಪಡೆದ ಆಸ್ಟ್ರೇಲಿಯಾ, ಟ್ರಾವಿಸ್ ಹೆಡ್-ಮಾರ್ಕಸ್ ಸ್ಟೋಯಿನಿಸ್ ಜತೆಯಾಟದ ಬಲದಿಂದ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 186 ರನ್‌ಗಳಿಸಿ ಸತತ 4ನೇ ಗೆಲುವು ದಾಖಲಿಸಿತು. ಅಂತಿಮ ಐದು ಓವರ್‌ಗಳಲ್ಲಿ ಗೆಲುವಿಗೆ 60 ರನ್ ಬೇಕಿತ್ತು.
ಸ್ಕಾಟ್ಲೆಂಡ್: 5 ವಿಕೆಟ್‌ಗೆ 180 (ಜಾರ್ಜ್ ಮುನ್ಷಿ 35, ಮೆಕ್‌ಮೂಲೆನ್ 60, ರಿಚಿ ಬೆರಿಂಗ್‌ಟನ್ 42*, ಮ್ಯಾಥ್ಯೂ ಕ್ರಾಸ್ 18, ಮ್ಯಾಕ್ಸ್‌ವೆಲ್ 44ಕ್ಕೆ 2, ಆಡಂ ಜಂಪಾ 30ಕ್ಕೆ 1). ಆಸ್ಟ್ರೇಲಿಯಾ: 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 186 (ಟ್ರಾವಿಸ್ ಹೆಡ್ 68, ವಾರ್ನರ್ 1, ಮ್ಯಾಕ್ಸ್‌ವೆಲ್ 11, ಸ್ಟೋಯಿನಿಸ್ 59, ಟಿಮ್ ಡೇವಿಡ್ 24*, ಮ್ಯಾಥ್ಯೂವೇಡ್ 4*, ಮಾರ್ಕ್ ವ್ಯಾಟ್ 34ಕ್ಕೆ 2, ಶರ್ೀ 42ಕ್ಕೆ 2). ಪಂದ್ಯಶ್ರೇಷ್ಠ: ಮಾರ್ಕಸ್ ಸ್ಟೋಯಿನಿಸ್.
7. ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್‌ನಲ್ಲಿ (2022-2024) ಗರಿಷ್ಠ ಸತತ 7 ಪಂದ್ಯ ಜಯಿಸಿದ ಇಂಗ್ಲೆಂಡ್ (2010-2012), ಭಾರತ (2012-2014) ದಾಖಲೆ ಸರಿಗಟ್ಟಿತು.