

ಆಕ್ಲೆಂಡ್: ಮಳೆಬಾಧಿತ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಡಕ್ವರ್ತ್ ಲೂಯಿಸ್-ಸ್ಟರ್ನ್ ನಿಯಮದನ್ವಯ ಆತಿಥೇಯ ನ್ಯೂಜಿಲೆಂಡ್ ಎದುರು 27 ರನ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಮಿಚೆಲ್ ಮಾರ್ಷ್ ಬಳಗ ಸರಣಿಯನ್ನು 3-0ಯಿಂದ ಕ್ಲೀನ್‌ಸ್ವೀಪ್ ಮಾಡಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸೀಸ್ ಇನಿಂಗ್ಸ್‌ಗೆ ಮಳೆ 3 ಬಾರಿ ಮಳೆ ಅಡಚಣೆ ತಂದಿತು. ಅಂತಿಮವಾಗಿ 10.4 ಓವರ್‌ಗಳಲ್ಲಿ 4 ವಿಕೆಟ್‌ಗೆ 118 ರನ್ ಗಳಿಸಿತು. ಡಿಎಲ್‌ಎಸ್ ನಿಯಮ ಪ್ರಕಾರ 10 ಓವರ್‌ಗಳಲ್ಲಿ 126 ರನ್ ಗಳಿಸುವ ಗುರಿ ಪಡೆದ ಕಿವೀಸ್ 3 ವಿಕೆಟ್‌ಗೆ 98 ರನ್‌ಗಳಿಸಲಷ್ಟೇ ಶಕ್ತವಾಯಿತು.
ಆಸ್ಟ್ರೇಲಿಯಾ: 10.4 ಓವರ್‌ಗಳಲ್ಲಿ 4 ವಿಕೆಟ್‌ಗೆ 114 (ಟ್ರಾವಿಸ್ ಹೆಡ್ 33, ಶಾರ್ಟ್ 27, ಮ್ಯಾಕ್ಸ್‌ವೆಲ್ 20, ಡೇವಿಡ್ 8*, ಕ್ಲಾರ್ಕ್‌ಸನ್ 8ಕ್ಕೆ 1). ನ್ಯೂಜಿಲೆಂಡ್: 10 ಓವರ್‌ಗಳಲ್ಲಿ 3 ವಿಕೆಟ್‌ಗೆ 98 (ಫಿನ್ ಅಲೆನ್ 13, ವಿಲ್ ಯಂಗ್ 14, ಫಿಲಿಪ್ಸ್ 40*, ಚಾಪ್‌ಮನ್ 17, ಜಾನ್ಸನ್ 10ಕ್ಕೆ 1).